ಜಿಲ್ಲೆ

ವಿದ್ಯುತ್ ವೈರ್ ಕಳ್ಳರ ಬಂಧನ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ತಾಲೂಕಿನ ವಂದಾರಗುಪ್ಪೆ ಬಳಿಯ ಸಿಲ್ಕ್ ಫಾರ್ಮ್ ಬಳಿ ನೂತನವಾಗಿ ನಿರ್ಮಿಸುತ್ತಿರುವ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ವಿದ್ಯುತ್ ವೈರ್ ಕಳವು ಮಾಡಿದ್ದ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ಸೈಯದ್ ಸೈಪ್ ಹಾಗೂ ಸೈಯದ್ ಮುಜಾಹೀರ್ ಬಂಧಿತರು.

9 ಲಕ್ಷ ಮೌಲ್ಯದ ವಿದ್ಯುತ್ ವೈರ್‌ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೇ 1 ರಂದು ವಿದ್ಯುತ್ ವೈರ್‌ಗಳು ಕಳುವಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಅನ್ವಯ ತನಿಖೆ ಕೈಗೊಳ್ಳಲಾಗಿತ್ತು.