ಜಿಲ್ಲೆ

ವಿದ್ಯುತ್‌ ಶಾಕ್‌ನಿಂದ ಹುಡುಗನ ಸಾವು

reportermng

ಮಂಗಳೂರು: ವೆನ್ಲಾಕ್‌ ಆಸ್ಪತ್ರೆ ಬಳಿಯ ಜೂಸ್‌ ಅಂಗಡಿಯಲ್ಲಿನ ಕೆಲಸಗಾರ ಹುಡುಗನೊಬ್ಬ ಆಕಸ್ಮಿಕವಾಗಿ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿದ್ದಾರೆ.
ಬಜಾಲ್‌ ನಿವಾಸಿ ಅನೀಶ್‌ ಮೃತಪಟ್ಟವರು. ಇವರು ವೆನ್ಲಾಕ್‌ ಸಮೀಪದ ಕೆಫೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಫೆಯನ್ನು ಶುಚಿಗೊಳಿಸುತ್ತಿರುವ ವೇಳೆ ವಿದ್ಯುತ್‌ ಪ್ರವಹಿಸುತ್ತಿದ್ದ ಟೇಬಲ್‌ ತಾಗಿ ಶಾಕ್‌ಗೊಳಗಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸಿಸಿಟಿವಿ ಫೂಟೇಜ್‌ನಲ್ಲಿ ಅನೀಶ್‌ ಅಂಗಡಿ ಕ್ಲೀನ್‌ ಮಾಡುತ್ತಿರುವುದು, ಆಗ ಒಮ್ಮೆ ಟೇಬಲ್‌ ಸ್ವಲ್ಪ ತಾಗಿ ಸಣ್ಣಮಟ್ಟಿನ ಶಾಕ್‌ ತಗಲುವುದು ಕಾಣುತ್ತದೆ. ಆಗ ಮುಂದೆ ಗಿರಾಕಿಯೊಬ್ಬರು ಯಾವುದೋ ವಸ್ತು ಖರೀದಿಸಿ ಹಣ ಕೊಡುತ್ತಾರೆ. ಅದನ್ನು ಟೇಬಲ್‌ನ ಒಳಗೆ ಹಾಕಲು ಡ್ರಾಯರ್‌ ಹಿಡಿಯುತ್ತಿದ್ದಂತೆಯೇ ಪ್ರಬಲವಾದ ವಿದ್ಯುತ್‌ ಶಾಕ್‌ನಿಂದ ಕೆಳಗೆ ಬೀಳುವುದು ಫೂಟೇಜ್‌ನಲ್ಲಿ ಕಂಡುಬಂದಿದೆ.
ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.