ಜಿಲ್ಲೆ

ವಿದ್ಯುತ್​ ತಗುಲಿ ಗಾಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ನಗರದ ಮಹಿಳಾ ಠಾಣಾ ಆವರಣದಲ್ಲಿ ಗುರುವಾರ ಸಂಜೆ ವಿದ್ಯುತ್​ ಸ್ಪರ್ಶಿಸಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವನಹಳ್ಳಿ ತಾಲೂಕಿನ ಹೂವಿನಹಾಡಿ ಗ್ರಾಮದ ರಾಕೇಶ್​ (35) ಗಾಯಗೊಂಡವರು. ಮಹಿಳಾ ಠಾಣೆ ಪಕ್ಕದಲ್ಲಿ ಶೌಚಗೃಹ ಕಟ್ಟಡ ನಿಮಾರ್ಣ ಮಾಡಲಾಗುತ್ತಿದ್ದು, ಗುರುವಾರ ರಜೆ ಇದ್ದ ಕಾರಣ ನಾಳಿನ ಕೆಲಸಕ್ಕೆಂದು ಕಬ್ಬಿಣದ ಕಂಬಿಗಳನ್ನು ಕಟ್ಟಡದ ಮೇಲೆ ಇಡಲು ಹೋದಾಗ ಅವಡ ಸಂಭವಿಸಿದೆ. ರಾಕೇಶ್​ ದೇಹದ ಬಲಭಾಗದಲ್ಲಿ ಶೇ.20 ಸುಟ್ಟಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳಿಸಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.