ಜಿಲ್ಲೆ

ಎರಡು ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ

reportermng

ಮಂಗಳೂರು: ನಗರದ ಬೋಳೂರಿನಲ್ಲಿ ಶನಿವಾರ ಚಾರ್ಚ್‌ಗೆ ಇಟ್ಟಿದ್ದ ಎರಡು ಇಲೆಕ್ಟ್ರಿಕ್ ಸ್ಕೂಟರ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಇನ್ನೆರಡು ಸ್ಕೂಟರ್‌ಗಳು ಭಾಗಶಃ ಹಾನಿಯಾಗಿವೆ.


ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್ ಬಳಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಚಾರ್ಜ್‌ಗೆ ಇಡಲಾಗಿತ್ತು. ಮಧ್ಯಾಹ್ನ ವೇಳೆ ಸ್ಕೂಟರ್‌ಗಳಿಗೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ಎರಡು ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸ್ಥಳೀಯರ ಪ್ರಯತ್ನದಿಂದಾಗಿ ಇನ್ನೆರಡು ಸ್ಕೂಟರ್‌ಗಳನ್ನು ದೂರಕ್ಕೆ ತರಲಾಯಿತು. ಅಷ್ಟರಲ್ಲೇ ಅವುಗಳಿಗೂ ಭಾಗಶಃ ಹಾನಿಯಾಗಿದೆ.
ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.