ವಾಲಿಕೊಂಡ ವಿದ್ಯುತ್​ ಕಂಬ. 
ಜಿಲ್ಲೆ

ಮನೆಗೆ ವಾಲಿಕೊಂಡಿರುವ ವಿದ್ಯುತ್​ ಕಂಬ, ತಂತಿ

ಪ್ರಮುಖ ಮುಖ್ಯಾಂಶಗಳು

  • ಕೃಷ್ಣನಗರದಲ್ಲಿ ಆತಂಕ
  • ಪದೇಪದೆ ವಿದ್ಯುತ್​ ಕಡಿತ
  • ದೂರು ನೀಡಿದರೂ ಕ್ರಮವಿಲ್ಲ
ವಿಜಯವಾಣಿ ಸುದ್ದಿಜಾಲ ಉಪ್ಪಳ
ಕೃಷ್ಣನಗರ ಎಸ್​.ಸಿ. ಉನ್ನತಿ ಕಾಲನಿಯಲ್ಲಿ ಮನೆಗಳಿಗೆ ವಿದ್ಯುತ್​ ಕಂಬ ಹಾಗೂ ತಂತಿ ವಾಲಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ.

ಪದೇಪದೆ ವಿದ್ಯುತ್​ ಕಡಿತ

ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಎಸ್​.ಸಿ. ಉನ್ನತಿಯಲ್ಲಿ ವಿದ್ಯುತ್​ ಕಂಬಗಳು ಆತಂಕ ಸೃಷ್ಟಿಸಿವೆ. ಇಲ್ಲಿನ ಕುಸುಮಾ ಎಂಬುವರ ಮನೆ ಬಳಿ ವಾಲಿಕೊಂಡ ವಿದ್ಯುತ್​ ಕಂಬ ಯಾವುದೇ ಕ್ಷಣ ಮನೆ ಮೇಲೆ ಬೀಳುವ ಆತಂಕವಿದೆ. ಇನ್ನೊಂದು ಕಂಬ ಅಶೋಕ ಎಂಬುವರ ಮನೆಯ ಹತ್ತಿರದಲ್ಲೇ ಇದ್ದು ಈ ಪರಿಸರದಿಂದ ಹಾದು ಹೋದ ತಂತಿ ಮನೆಯ ಮೇಲ್ಭಾಗಕ್ಕೆ ಹಾಗೂ ತೆಂಗಿನಮರಕ್ಕೂ ಸ್ಪರ್ಶಿಸುತ್ತಿದೆ. ಮರದ ಕೊಂಬೆ ತಾಗಿ ಪದೇಪದೆ ವಿದ್ಯುತ್​ ಕಡಿತಗೊಳ್ಳುತ್ತಿದ್ದು, ಈ ಪರಿಸರದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ದೂರು ನೀಡಿದರೂ ಕ್ರಮವಿಲ್ಲ

ವಿದ್ಯುತ್​ ಕಂಬವನ್ನು ಬದಲಾಯಿಸಲು ಸ್ಥಳೀಯರು ಉಪ್ಪಳ ವಿದ್ಯುತ್​ ಸೆಕ್ಷನ್​ಗೆ ದೂರು ನೀಡಿದರೂ ಕ್ರಮಕೈ ಮುಂದಾಗಲಿಲ್ಲವೆಂದು ನಿವಾಸಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಳೆಗಾಲದ ಮೊದಲೇ ದುರಸ್ತಿಗೊಳಿಸಿ ಸಂಭವಿಸುವ ಅಪಾಯವನ್ನು ತಪ್ಪಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.