ಜಿಲ್ಲೆ

ಹರಿವ ನೀರಿಗೆ ವಿದ್ಯುತ್ ಸಂಪರ್ಕ ನೀಡಿ ದುಷ್ಕೃತ್ಯ

Dakshina Kannada

ಬೆಳ್ತಂಗಡಿ: ವಿದ್ಯುತ್ ಕಳ್ಳತನ ಮಾಡಿ ಅದನ್ನು ತಂತಿಯ ಮೂಲಕ ಹರಿಯುವ ನೀರಿಗೆ ಸಂಪರ್ಕಕೊಟ್ಟ ಅಮಾನವೀಯ ಘಟನೆ ಅಳದಂಗಡಿ ಸಮೀಪದ ಬಡಗಕಾರಂದೂರಲ್ಲಿ ಕಂಡುಬಂದಿದೆ.

ನೀರಿನಲ್ಲಿ ಶಾಕ್ ಹೊಡೆಯುತ್ತಿರುವ ಬಗ್ಗೆ ಸ್ಥಳೀಯರು ಮೆಸ್ಕಾಂ ಲೈನ್‌ಮನ್ ಗಮನಕ್ಕೆ ತಂದು ಹುಡುಕಾಡಿದಾಗ ಬಡಗಕಾರಂದೂರು ಗ್ರಾಮದ ದರ್ಖಾಸು ನಿವಾಸಿ ಸೆವೆರಾ ಪಿರೇರಾ ಎಂಬಾತ ತನ್ನ ಪಂಪ್ ಶೆಡ್‌ನಿಂದ ವಿದ್ಯುತ್ ಕಳ್ಳತನ ಮಾಡಿ ತಂತಿಯ ಮೂಲಕ ಹಳ್ಳಕ್ಕೆ ಸಂಪರ್ಕ ನೀಡಿರುವುದು ಕಂಡು ಬಂದಿದೆ.

ಬೆಳ್ತಂಗಡಿ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುತ್ ಕಳ್ಳತನ ಮಾಡಿ ಯಾವುದೋ ದುಷ್ಕೃತ್ಯ ನಡೆಸಲು ಸಂಚು ನಡೆಸಿರುವ ಬಗ್ಗೆ ಸಂಶಯಿಸಲಾಗಿದ್ದು, ವೇಣೂರು ಪೋಲಿಸರಿಗೆ, ಅಳದಂಗಡಿ ಮೆಸ್ಕಾಂ ಇಂಜಿನಿಯರ್ ದೂರು ನೀಡಿದ್ದಾರೆ.