ಕವಿತಾಳ: ವಿದ್ಯಾರ್ಥಿಗಳು ದೇಶದ ಪ್ರಜಾಪ್ರಭುತ್ವ ಮತ್ತು ಚುನಾವಣೆ ಮಹತ್ವ ಅರಿಯುವುದು ಅಗತ್ಯವಿದೆ. ಹೀಗಾಗಿ ಶಾಲಾ ಮಂತ್ರಿ ಮಂಡಲ ರಚಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ಮುಖ್ಯಶಿಕ್ಷಕಿ ಮಂಜುಳಾ ಅಂಗಡಿ ಹೇಳಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಪೊಲೀಸ್ ಮತ್ತು ಚುನಾವಣೆ ಸಿಬ್ಬಂದಿಯಂತೆ ಸಮವಸ್ತ್ರ ಧರಿಸಿ ಚುನಾವಣೆ ಕಾರ್ಯನಿರ್ವಹಿಸಿದರು.
ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಪ್ರತಿಯನ್ನು ಚುನಾವಣಾಧಿಕಾರಿಗೆ ತೋರಿಸಿ ಸರದಿಯಲ್ಲಿ ನಿಂತು ಮತದಾನ ಮಾಡಿದರು. ನಂತರ ಆಯ್ಕೆಯಾದವರಿಗೆ ವಿವಿಧ ಹುದ್ದೆಗಳನ್ನು ನೀಡಿ ಮಹತ್ವ ತಿಳಿಸಲಾಯಿತು. ಶಿಕ್ಷಕರಾದ ಗಿರೀಶ್ ಅಂಗಡಿ, ಸಿದ್ರಾಮಪ್ಪ, ಪ್ರಾಣೇಶ, ಶಂಕ್ರಯ್ಯಸ್ವಾಮಿ, ಚಂದ್ರಕಲಾ, ಶಾರದಾ ಇತರರಿದ್ದರು.