ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿ ಎಚ್.ಸಿ.ಚೌಡೇಗೌಡ, ಉಪಾಧ್ಯಕ್ಷರಾಗಿ ಎಚ್.ಎನ್.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು. ಕಿರಣ್‌ಕುಮಾರ್, ದೇವರಾಜ್, ರಮೇಶ್ ಇತರರು ಇದ್ದರು. 
ಜಿಲ್ಲೆ

ನೀರು ಬಳಕೆದಾರರ ಸಹಕಾರ ಮಹಾಮಂಡಳಕ್ಕೆ ಆಯ್ಕೆ

ಹುಣಸೂರು: ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಮಹಾ ಮಂಡಲದ ಅಧ್ಯಕ್ಷರಾಗಿ ಅರಕಲಗೂಡು ತಾಲೂಕು ಸರಗೂರು ಗ್ರಾಮದ ಎಸ್.ಸಿ.ಚೌಡೇಗೌಡ ಮತ್ತು ಉಪಾಧ್ಯಕ್ಷರಾಗಿ ಹುಣಸೂರು ತಾಲೂಕು ಹನಗೋಡು ಗ್ರಾಮದ ಎಚ್.ಎನ್.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.

ಕುಶಾಲನಗರದ ಮಹಾಮಂಡಳದ ಕಚೇರಿಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದರು.
ಕಾರ್ಯದರ್ಶಿ ಮಹೇಶ್, ಹುಣಸೂರು ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಕಟ್ಟೆಮಳಲವಾಡಿ ಕಿರಣ್‌ಕುಮಾರ್, ದೇವರಾಜು, ರಮೇಶ್ ಸೇರಿದಂತೆ ಎಲ್ಲ 13 ನಿರ್ದೇಶಕರು ಹಾಜರಿದ್ದರು.