ಪುತ್ತೂರು ಗ್ರಾಮಾಂತರ: ಕುರಿಯ ಗ್ರಾಮದ ಪಾಲಿಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಹಾಗೂ ಸಮಿತಿಯ ಅಧ್ಯಕ್ಷರ ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ವಿಶ್ವಜಿತ್ ಅಮ್ಮುಂಜೆ ಆಯ್ಕೆಗೊಂಡಿದ್ದಾರೆ.
ಶಾಸಕ ಅಶೋಕ್‌ಕುಮಾರ್ ರೈ ನಿರ್ದೇಶನದಂತೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸದಸ್ಯರಾಗಿ ಹೊನ್ನಪ್ಪ ನಾಯ್ಕ ಸಂಪ್ಯದಮೂಲೆ, ನಿರಂಜನ್ ಶೆಟ್ಟಿ ಸಂಪ್ಯದಮೂಲೆ, ಗುರುಪ್ರಸಾದ್ ಮಾದೇರಿ, ರಮೇಶ್ ಅಂಗಿತ್ತಾಯ, ನಾರಾಯಣ ಮಣಿಯಾಣಿ ಇಡಬೆಟ್ಟು, ನಳಿನಾಕ್ಷಿ ಸುಧಾಕರ ಕೊಟ್ಯಾನ್ ಇಡಬೆಟ್ಟು, ಪೂರ್ಣಿಮಾ ರಮೇಶ್ ಪೂಜಾರಿ ಮಾಣಿಂಜಾಲು ಮತ್ತು ಅರ್ಚಕ ಸೂರ್ಯಪ್ರಕಾಶ್ ಅಂಗಿತ್ತಾಯ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಆರ್ಯಾಪು ಮತ್ತು ಕುರಿಯ ಗ್ರಾಮದ ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಏಳ್ನಾಡುಗುತ್ತು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಮ್ತತಿತರರು ಉಪಸ್ಥಿತರಿದ್ದರು.