ಎಸ್.ಬಿ. ಪಾಟೀಲ್ 
ಜಿಲ್ಲೆ

ಕೃಷಿಕ ಸಮಾಜದ ಸಮಿತಿಗೆ ಚುನಾವಣೆ

ರುದ್ರಪ್ಪ ವಾಲಿ

ಸಿರಗುಪ್ಪ: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ತಾಲೂಕು ಘಟಕದ ಕಾರ್ಯಕಾರಿ ಸಮಿತಿಗೆ ಡಿ.15ರಂದು ಚುನಾವಣೆ ನಡೆಯಲಿದೆ. ನ.30 ರಿಂದ ನಾಮಪತ್ರ ಸಲ್ಲಿಕೆ, ಡಿ.9 ನಾಮಪತ್ರ ವಾಪಸ್ ಪಡೆಯುವುದು, ಡಿ.15ಕ್ಕೆ ಮತಗಳ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು. ತಾಲೂಕಿನ ಕೃಷಿಕ ಸಮಾಜದ ಆಜೀವ ಸದಸ್ಯರ ಪಟ್ಟಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.