ಜಿಲ್ಲೆ

ಬಿಜೆಪಿ ಭರ್ಜರಿ ಗೆಲುವು ಲೋಕಸಭಾ ಚುನಾವಣೆಗೆ ದಿಕ್ಸೂಚಿ

ಉಡುಪಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಲಿತಾಂಶದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಂಡ ಗೆಲುವು ದಾಖಲಿಸಿದ್ದು, ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ವತಿಯಿಂದ ಕಚೇರಿ ಆವರಣದಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಬಡವರ ಕಲ್ಯಾಣ ಯೋಜನೆಗಳು ಹಾಗೂ 'ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​' ಪರಿಕಲ್ಪನೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗೌರವಯುತವಾಗಿ ಬಾಳುವ ಅವಕಾಶ ಕಲ್ಪಿಸಿದೆ. ಆಯಾ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರ ಬಲಿಷ್ಠ ಸಂಘಟನೆ ಈ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ತೆಲಂಗಾಣದಲ್ಲೂ ಬಿಜೆಪಿ ಉತ್ತಮ ಸಾಧನೆಗೈದಿದೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲೂ ಬಿಜೆಪಿ ಅಧಿಕಾರಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಬಿಟ್ಟಿ ಭಾಗ್ಯಗಳಿಗಿಂತ ಅಭಿವೃದ್ಧಿ ಪರ, ಜನ ಪರ ಆಡಳಿತವೇ ಮುಖ್ಯ ಎಂಬುದನ್ನು ಜನತೆ ಈ ಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ. ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿದರು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಸುಪ್ರಸಾದ್​ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗಾ, ಶ್ಯಾಮಲ ಕುಂದರ್​, ವೀಣಾ ಶೆಟ್ಟಿ, ಸದಾನಂದ ಪ್ರಭು, ಸತ್ಯಾನಂದ ನಾಯಕ್​, ಶಿವಕುಮಾರ್​ ಅಂಬಲಪಾಡಿ, ಗಿರೀಶ್​ ಅಂಚನ್​, ದಿನೇಶ್​ ಅಮೀನ್​, ಶ್ರೀನಿಧಿ ಹೆಗ್ಡೆ, ಆನಂದ್​ ಸುವರ್ಣ, ನಳಿನಿ ಪ್ರದಿಪ್​ರಾವ್​, ಮಂಜುಳಾ ಪ್ರಸಾದ್​, ರಜನಿ ಹೆಬ್ಬಾರ್​, ಮಂಜುನಾಥ್​ ಹೆಬ್ಬಾರ್​, ಸುಭಾಷಿತ್​ ಕುಮಾರ್​, ರಜೇಂದ್ರ ಪಂದುಬೆಟ್ಟು, ಚಿನ್ಮಯ್​, ಅಕ್ಷಿತ್​ ಶೆಟ್ಟಿ ಹೆರ್ಗಾ ಮೊದಲಾದವರು ಭಾಗವಹಿಸಿದ್ದರು.