ಮದ್ದೂರು: ಪಟ್ಟಣದ ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಗಂಗಾಧರ ಅವರು ಅವಿರೋಧ ಆಯ್ಕೆಯಾದರು.
ಬಿ.ವಿ.ಮಂಜುನಾಥ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಎಸ್.ಎಂ.ಗಂಗಾಧರ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಡಿ.ಆಶಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎಸ್.ಎಂ.ಗಂಗಾಧರ ಮಾತನಾಡಿ, ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗಾಗಿ ಸಂಘದ ಎಲ್ಲ ಪದಾಧಿಕಾರಿಗಳ ವಿಶ್ವಾಸ ಪಡೆದು ಮುನ್ನಡೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
2024ನೇ ವರ್ಷದ ಹೊಸ ವರ್ಷದ ದಿನಚರಿಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
ನಿರ್ದೇಶಕರಾದ ಬಿ.ವಿ.ಮಂಜುನಾಥ್, ಸ್ವಾಮಿ, ಪಿ.ರಾಜಶೇಖರ್, ಸಿದ್ದಮ್ಮ, ಗೌರಿಶಂಕರ್, ವೀರೇಂದ್ರ, ವೈ.ಬಿ.ಶ್ರೀಕಂಠಸ್ವಾಮಿ, ಎಂ.ವೀರಭದ್ರಸ್ವಾಮಿ, ಬಸವರಾಜು ಭೀಮನಕೆರೆ, ತೋಂಟದಾರ್ಯ, ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ರಾಜಮಣಿ ಇದ್ದರು.