ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂದ ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು. ಡಿ.ಜಿ. ಬಿರಾದಾರ, ಸುನೀಲ ಬಿರಾದಾರ, ಸುರೇಶ ಚೂರಿ ಮತ್ತಿತರಿದ್ದಾರೆ.  
ಜಿಲ್ಲೆ

ಪದಾಧಿಕಾರಿಗಳ ಆಯ್ಕೆ

ವಿಜಯಪುರ: ನಗರದ ಜಿಲ್ಲಾ ನ್ಯಾಯವಾದಿಗಳ ಸಂದ ಮುಂದಿನ 2 ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆಗೆ ಶನಿವಾರ ಚುನಾವಣೆ ನಡೆಯಿತು.

ಜಿಲ್ಲಾ ನ್ಯಾಯಾಲಯದ ವಕೀಲರ ಸಭಾಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ.ಜಿ. ಬಿರಾದಾರ, ಉಪಾಧ್ಯಕ್ಷರಾಗಿ ಸುನೀಲ ಬಿರಾದಾರ, ಕಾರ್ಯದರ್ಶಿಯಾಗಿ ಸುರೇಶ ಚೂರಿ, ಜಂಟಿ ಕಾರ್ಯದರ್ಶಿಯಾಗಿ ಉಸ್ಮಾನ ಆಲಗೂರ, ಲೈಬ್ರರಿ ಕಾರ್ಯದರ್ಶಿಯಾಗಿ ಯಲ್ಲಪ್ಪ ಬಡಿಗೇರ, ಖಜಾಂಚಿಯಾಗಿ ಎಂ.ಎ. ಕಾಖಂಡಕಿ, ಮ್ಯಾನೇಜಿಂಗ್​ ಕಮಿಟಿ ಮೆಂಬರ್​ ಆಗಿ ಬಸವರಾಜ ಬಿರಾದಾರ, ವಿನಾಯಕ ಗಾಳಪ್ಪಗೋಳ, ಮಹಮ್ಮದ್​ಗೌಸ್​ ಹವಾಲ್ದಾರ, ಪರಶುರಾಮ ಹುವಣಗೋಳ ಮತ್ತು ಮೊಹಮ್ಮದಹುಸೇನ ಇನಾಮದಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಆರ್​.ಎಸ್​. ನಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.