ಜಿಲ್ಲೆ

ವಾಲ್ಮೀಕಿ ನಾಯಕರ ಸಂಘದ ಪದಾಧಿಕಾರಿಗಳ ಆಯ್ಕೆ

ಸಾಲಿಗ್ರಾಮ: ಸಾಲಿಗ್ರಾಮ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ನೂತನ ಅಧ್ಯಕ್ಷರಾಗಿ ಚಿಕ್ಕ ಭೇರ್ಯ ಗ್ರಾಮದ ಸಿ.ಸಿ.ಮಹದೇವ್ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಸಂಘದ ಸದಸ್ಯರುಗಳ ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಸಂಘದ ಗೌರವಾಧ್ಯಕ್ಷರಾಗಿ ಮಾದನಾಯಕ (ಸಾಲಿಗ್ರಾಮ), ಉಪಾಧ್ಯಕ್ಷರಾಗಿ ವೆಂಕಟೇಶ ನಾಯಕ (ದೇವಿತಂದ್ರೆ), ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ಮಂಜುನಾಥ್ (ಚಿಕ್ಕಕೊಪ್ಪಲು), ಸಹ ಕಾರ್ಯದರ್ಶಿಯಾಗಿ ಭೈರನಾಯಕ (ಶ್ಯಾಬಾಳು), ಖಜಾಂಚಿಯಾಗಿ ಸಂತೋಷ (ಹೊಸೂರು), ಸಂಘಟನಾ ಕಾರ್ಯದರ್ಶಿಯಾಗಿ ಕುಮಾರನಾಯಕ (ಚನ್ನಟಗೆರೆ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆರ್.ಸಿ.ರಮೇಶನಾಯಕ (ರೊಪ್ಪ), ಕ್ರೀಡಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನನಾಯಕ (ಚನ್ನಟಗೆರೆ), ಸಲಹೆಗಾರರಾಗಿ ತಿಮ್ಮನಾಯಕ (ಹರದನಹಳ್ಳಿ), ಲಕ್ಷ್ಮಣನಾಯಕ (ಹನಸೋಗೆ ), ಸ್ವಾಮಿನಾಯಕ (ಶ್ಯಾಬಾಳು) ಅವರುಗಳು ಆಯ್ಕೆಯಾಗಿದ್ದಾರೆ.


ಸಭೆಯಲ್ಲಿ ಮುಖಂಡರಾದ ರೊಪ್ಪ ಸುರೇಶ್, ಮುಂಜನಹಳ್ಳಿ ಮಹದೇವನಾಯಕ, ಡಾ.ಎಸ್.ಜೆ.ಗಣೇಶ್, ಕೆಇಬಿ ದೇವರಾಜು, ಗೋಬಿ ಶಂಕರ್, ಲೊಕೇಶನಾಯಕ, ಕೆ.ಪ್ರಕಾಶ್, ಫೈನಾನ್ಸ್ ಮಹದೇವನಾಯಕ, ಮಿರ್ಲೆ ವೆಂಕಟೇಶನಾಯಕ, ಹರೀಶ್ ನಾಯಕ, ಆರ್.ಪಿ.ರಮೇಶ್ ನಾಯಕ, ಕೃಷ್ಣನಾಯಕ, ಕುಬೇರ, ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.