ನರಗುಂದ: ಗದಗ ಜಿಲ್ಲಾ ಭಾರತೀಯ ಕಿಸಾನ್ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಗದಗನಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನರಗುಂದದ ಸಂಗನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಮಂಜುನಾಥ ಜಾಲರಡ್ಡಿ ಹಾಗೂ ಟಾಕಪ್ಪ ಸಾತಪುತೆ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಕೋಳಿವಾಡ, ಕಾರ್ಯದರ್ಶಿಯಾಗಿ ಉಮೇಶಗೌಡ ಪಾಟೀಲ, ಸಹ ಕಾರ್ಯದರ್ಶಿ ಲಕ್ಷ್ಮಣ ಗಾಜಿ, ಕಾರ್ಯಾಲಯ ಕಾರ್ಯದರ್ಶಿ ಆನಂದ ನೀಲಪ್ಪಗೌಡ್ರ, ಕೋಶಾಧ್ಯಕ್ಷ ಸೋಮಶೇಖರ ಹಿರೇಮಠ, ಮಹಿಳಾ ಪ್ರಮುಖರಾಗಿ ಶಕುಂತಲಾ ಕುಂದಿ, ಯುವ ಪ್ರಮುಖ ಹಾಲಪ್ಪ ಶಿವಶೆಟ್ಟಿ, ಸಾವಯುವ ಪ್ರಮುಖರಾಗಿ ಶಿವಾನಂದ ನೆಲಗುಡ್ಡದ ಆಯ್ಕೆಗೊಂಡರು.
ಬಳಿಕ ಸಂಘದ ಸದಸ್ಯರು ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲಾದ್ಯಂತ ಸುರಿದ ನಿರಂತರ ಮಳೆ, ಪ್ರವಾಹದಿಂದ ಬೆಳೆ ಹಾನಿಯಾಗಿದ್ದು, ಪ್ರತಿ ಹೆಕ್ಟೇರ್ಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕೋರಿದರು. ಸಂಘದ ಅಧ್ಯಕ್ಷ ಬಿ.ಎಂ.ಕೊಕ್ರೆ, ಉತ್ತರಪ್ರಾಂತ ಅಧ್ಯಕ್ಷ ವಿವೇಕ ಮೋರೆ ಇತರರು ಉಪಸ್ಥಿತರಿದ್ದರು.