ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಪ.ಜಾತಿ ಮತ್ತು ಪ.ವರ್ಗಗಳ ನೌಕರರ ಸಂಘದ 2025 - 29 ನೇ ಅವಧಿಗೆ ಎಂ. ಬೋರಪ್ಪ ಅಧ್ಯಕ್ಷ ಹಾಗೂ ಇತರೆ ವಿಭಾಗಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 
ಜಿಲ್ಲೆ

ಅಂಬೇಡ್ಕರ್ ಎಸ್ಸಿ, ಎಸ್ಟಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

ಮಳವಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ.ಜಾತಿ ಮತ್ತು ಪ.ವರ್ಗಗಳ ನೌಕರರ ಸಂಘದ 2025-29ನೇ ಅವಧಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಗೌರವಾಧ್ಯಕ್ಷರಾಗಿ ಮುರಳೀಧರ್, ಅಧ್ಯಕ್ಷರಾಗಿ ಎಂ.ಬೋರಯ್ಯ, ಉಪಾಧ್ಯಕ್ಷರಾಗಿ ಸಿದ್ದಲಿಂಗಮೂರ್ತಿ, ಎಸ್.ಸುಕನ್ಯಾ, ಕಾರ್ಯದರ್ಶಿಯಾಗಿ ಮಹೇಶ್ ಬಾಬು, ಖಜಾಂಚಿಯಾಗಿ ಜಯರಾಮ, ಸಂಘಟನಾ ಕಾರ್ಯದರ್ಶಿಗಳಾಗಿ ನಿಖಿಲೇಶ್, ಆರ್. ಮಲ್ಲಿಕಾರ್ಜುನ, ಜಿಲ್ಲಾ ಪ್ರತಿನಿಧಿಗಳಾಗಿ ಲೆಕ್ಕಪರಿಶೋಧಕ ಕೃಷ್ಣಮೂರ್ತಿ, ಪತ್ರಿಕಾ ಪ್ರತಿನಿಧಿಯಾಗಿ ರೇವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದರು.