ಜಿಲ್ಲಾ ಯುವ ಘಟಕದ ಅಧ್ಯಕ್ಷ ಹುಲಗಪ್ಪ ಮಡಿವಾಳ, ಗೌರವ ಅಧ್ಯಕ್ಷರಾದ ಗವಿಸಿದ್ದಪ್ಪ ಮಡಿವಾಳ, ಮೂಕಪ್ಪ ಮಡಿವಾಳ ಬಸಾಪುರ, ಹಿರಿಯರಾದ ಪರಸಪ್ಪ ಮಡಿವಾಳರ ಇತರರಿದ್ದರು. 
ಜಿಲ್ಲೆ

ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಮಡಿವಾಳ ಸಮುದಾಯದ ಜಿಲ್ಲಾಧ್ಯಕ್ಷ ಕೃಷ್ಣ ಮಡಿವಾಳ
ಕೊಪ್ಪಳ : ಸಮುದಾಯದ ಏಳಿಗೆ ಹಾಗೂ ಸಂಘಟನೆಯ ಬಲವರ್ಧನೆಗಾಗಿ, ಕೊಪ್ಪಳ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು, ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು, ಎಂದು ಜಿಲ್ಲಾ ಮಡಿವಾಳ ಸಮುದಾಯದ ಜಿಲ್ಲಾಧ್ಯಕ್ಷ ಕೃಷ್ಣ ಮಡಿವಾಳ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕು ಘಟಕದ ಅಧ್ಯಕ್ಷರಾಗಿ ಕುಣಿಕೇರಿಯ ಶರಣಪ್ಪ ಮಡಿವಾಳರ, ಉಪಾಧ್ಯಕ್ಷರಾಗಿ ಈರಣ್ಣ ಮಡಿವಾಳರ ಹಾಗೂ ಮಲ್ಲಪ್ಪ ಮಡಿವಾಳರ, ಕಾರ್ಯದರ್ಶಿಯಾಗಿ ಅಮರೇಶ ತಿಪ್ಪಣ್ಣ ಮಡಿವಾಳರ, ಉಪಕಾರ್ಯದರ್ಶಿಯಾಗಿ ಮಂಜುನಾಥ ಮಡಿವಾಳರ, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜ ಮಡಿವಾಳರ, ಹನುಮೇಶ ಬಸವರಾಜ ಮಡಿವಾಳರ ಮತ್ತು ವೀರಭದ್ರಪ್ಪ ಮಡಿವಾಳರ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶರಣಪ್ಪ ಮಡಿವಾಳರ, ರಾಜು ಮಡಿವಾಳರ, ರಮೇಶ ಮಡಿವಾಳರ ಪುರ, ಸಿದ್ದು ಮಡಿವಾಳರ, ಅಜ್ಜಪ್ಪ ಮಡಿವಾಳರ, ಅನಿಲ ಮಡಿವಾಳರ, ದೀಲಿಪ್​ ಮಡಿವಾಳರ ಹಾಗೂ ವಸಂತ ಮಡಿವಾಳರ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮಡಿವಾಳ ಮಾಚಿದೇವ ಜಯಂತಿಯನ್ನು ಫೆ. 16 ರಂದು ಆಚರಿಸಲಾಗುತ್ತಿದ್ದು. ಅಂದು ಬೆಳಿಗ್ಗೆ ಕೊಪ್ಪಳದ ಗಡಿಯಾರ ಕಂಬದಿಂದ ಸಾಹಿತ್ಯ ಭವನದವರೆಗೆ ಕುಂಭ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ಜರುಗಲಿದೆ. ನಂತರ ನಗರದ ಸಾಹಿತ್ಯ ಭವನದಲ್ಲಿ ಸಮಾರೋಪ ಸಮಾರಂಭ ಮತ್ತು ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು ತಿಳಿಸಿದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಹುಲಗಪ್ಪ ಮಡಿವಾಳ, ಗೌರವ ಅಧ್ಯಕ್ಷರಾದ ಗವಿಸಿದ್ದಪ್ಪ ಮಡಿವಾಳ, ಮೂಕಪ್ಪ ಮಡಿವಾಳ ಬಸಾಪುರ, ಹಿರಿಯರಾದ ಪರಸಪ್ಪ ಮಡಿವಾಳರ ಇತರರಿದ್ದರು.