ಜಿಲ್ಲೆ

ನೂತನ ಪದಾಧಿಕಾರಿಗಳ ಆಯ್ಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಪಶು ವೈದ್ಯಕಿಯ ಪರೀಕ್ಷಕರ ಸಂಘ ಜಿಲ್ಲಾ ಘಟಕಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ಅಧ್ಯಕ್ಷರಾಗಿ ಕಲಘಟಗಿಯ ಎಂ.ಎಸ್​. ಘಂಟೆ, ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ನಾಗೇಶ ಜಮ್ಮಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಧಾರವಾಡದ ಮಾರ್ತಾಂಡಪ್ಪ ಕತ್ತಿ, ಜಂಟಿ ಕಾರ್ಯದಶಿರ್ಯಾಗಿ ನವಲಗುಂದದ ಪ್ರಕಾಶ ಬಡಿಗೇರ, ಖಜಾಂಚಿಯಾಗಿ ಧಾರವಾಡದ ಶ್ರೀಶೈಲ ಚಿಕನಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಹುಬ್ಬಳ್ಳಿಯ ಎಸ್​.ವಿ. ಪಾಟೀಲ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧಾರವಾಡದ ಎಂ.ಕೆ.ಚವ್ಹಾಣ ಅವರನ್ನು ನಾಮನಿರ್ದೇಶನ ಮಾಡಿ ಆಯ್ಕೆಮಾಡಲಾಯಿತು ಎಂದು ಚುನಾವಣಾಧಿಕಾರಿ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಹಾಗಾಂವ ತಿಳಿಸಿದ್ದಾರೆ.

ಹಿಂದಿನ ಅಧ್ಯಕ್ಷ ಪಾರ್ಶ್ವನಾಥ ಹೊಸಮನಿ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಎಸ್​.ಎಂ. ಕರಬಣ್ಣವರ್​, ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಗಿರೀಶ ಕುಲಕರ್ಣಿ, ಬೆಳಗಾವಿ ವಿಭಾಗೀಯ ಜಂಟಿ ಕಾರ್ಯದರ್ಶಿ ವೈ.ಸಿ.ಮೇಲಿನಮನಿ, ತಾಲೂಕಿನ ಪದಾಧಿಕಾರಿಗಳು, ಇತರರು ಇದ್ದರು.