ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಉಳಿದಿರುವ ಕೇವಲ ಎರಡೂವರೆ ತಿಂಗಳ ಅವಧಿಗೆ ಹೊಸ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್, ಉಪ ಮೇಯರ್ ಆಗಿ ಬಿಜೆಪಿಯ ಡಾ.ಜಿ. ರೂಪಾ 6 ಸೆಪ್ಟೆಂಬರ್ 2022 ರಂದು ಆಯ್ಕೆಗೊಂಡಿದ್ದು, ಇವರ ಅಧಿಕಾರಾವಧಿ ಇಂದಿಗೆ (ಸೆ.5) ಮುಕ್ತಾಯಗೊಂಡಿದೆ. ಈ ಬಾರಿಯ ಕೌನ್ಸಿಲ್‌ನ ಅಧಿಕಾರಾ ವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದೆ. ಉಳಿದ ಕೇವಲ ಎರಡೂವರೆ ತಿಂಗಳಿಗೋಸ್ಕರ ಮತ್ತೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಸರ್ಕಾರವನ್ನೂ ಕಾಡುತ್ತಿದೆ.
ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪಾಲಿಕೆ ಚುನಾವಣೆ, ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ನಗರ ಪಾಲಿಕೆ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದರು. ಈ ಸಂದರ್ಭ ಕಾಂಗ್ರೆಸ್‌ನ ಕೆಲವು ಸದಸ್ಯರು ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸುವಂತೆ ಸಲಹೆ ನೀಡಿದ್ದರು. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಒಲವು ತೋರಿಸಿಲ್ಲ.
ನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರ ಪಡೆಯಲು ಮತ್ತೊಂದು ಪಕ್ಷದ ನೆರವು ಪಡೆಯುವುದು ಅನಿವಾರ್ಯ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ನೊಂದಿಗೆ ಕೈ ಜೋಡಿಸಲು ಕಾಂಗ್ರೆಸ್ ಆಸಕ್ತಿ ತೋರಿಸುವ ಸಾಧ್ಯತೆ ಇಲ್ಲ. ಹಾಗಾಗಿ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸದರೆ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದಂತೆ ಆಗುತ್ತದೆ. ಹೀಗಾಗಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸುವುದು ಬೇಡ ಎಂಬುದು ಕಾಂಗ್ರೆಸ್‌ನ ಬಹುತೇಕರ ಅಭಿಪ್ರಾಯವಾಗಿದೆ. ಬಹುತೇಕ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಇದ್ದು, ಒಂದೆರಡು ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ. ಚುನಾವಣೆ ನಡೆದರೆ ಮೇಯರ್ ಸ್ಥಾನವನ್ನು ಪಡೆಯಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಿದ್ಧವಾಗಿದೆ. ಒಂದುವೇಳೆ ಚುನಾವಣೆ ನಡೆಸದೆ ಇದ್ದರೆ ಹಾಲಿ ಮೇಯರ್ ಮೇಯರ್ ಶಿವಕುಮಾರ್ ಹಾಗೂ ಉಪ ಮೇಯರ್ ಡಾ.ಜಿ. ರೂಪಾ ಪಾಲಿಕೆ ಅವಧಿ ಮುಗಿಯುವರೆಗೆ ಮೇಯರ್ ಆಗಿ ಮುಂದುವರೆಯಲಿದ್ದಾರೆ.
65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರದ ಗದ್ದುಗೆ ಏರಬೇಕಾದರೆ ವಿವಿಧ ಪಕ್ಷಗಳ ಸದಸ್ಯರು ಹಾಗೂ ಪಕ್ಷೇತರರನ್ನು ಸೆಳೆಯುವ ಅನಿವಾರ್ಯತೆ ಇದೆ. ಆದರೆ, ಅದು ಸುಲಭದ ಕೆಲಸವೇನು ಅಲ್ಲ.
4 ಅವಧಿ 6 ಮೇಯರ್..!
ಒಟ್ಟು 5 ವರ್ಷಗಳ ಅವಧಿಯಲ್ಲಿ 5 ಮೇಯರ್ ಹಾಗೂ 5 ಉಪ ಮೇಯರ್‌ಗಳು ಆಯ್ಕೆಗೊಳ್ಳಬೇಕಾಗಿತ್ತು. ಆದರೆ, ಹಲವು ರಾಜಕೀಯ ಕಾರಣಗಳಿಗೊಸ್ಕರ ಈ ಬಾರಿ ಕೇವಲ 4 ಅವಧಿಯಲ್ಲಿಯೇ 6 ಮೇಯರ್‌ಗಳು ಹಾಗೂ 5 ಉಪ ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿದೆ. 4ನೇ ಅವಧಿಯ ಮೇಯರ್ ಸ್ಥಾನಕ್ಕೆ ಸಕಾಲದಲ್ಲಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ 3ನೇ ಅವಧಿಯಲ್ಲಿ ಹಂಗಾಮಿ ಮೇಯರ್ ಸೇರಿದಂತೆ ಮೂವರು ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿತು. 3ನೇ ಅವಧಿ ಒಂದು ವರ್ಷಕ್ಕೆ ಮುಕ್ತಾಯಗೊಳ್ಳಬೇ ಕಾಗಿತ್ತು. ಆದರೆ, ಈ ಅವಧಿಯಲ್ಲಿ ಮೂವರು ಮೇಯರ್‌ಗಳು (ರುಕ್ಮಿಣಿ ಮಾದೇಗೌಡ, ಅನ್ವರ್ ಬೇಗ್, ಸುನಂದ ಪಾಲನೇತ್ರ) ಒಟ್ಟಾರೆ 1 ವರ್ಷ 6 ತಿಂಗಳು ಅಧಿಕಾರ ನಡೆಸಿದರು. ಅಲ್ಲದೆ 2 ಹಾಗೂ 3ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸಲು ಕ್ರಮವಾಗಿ 2, 1 ತಿಂಗಳು ವಿಳಂಬವಾಯಿತು. ಹೀಗಾಗಿ 5ನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆದರೆ ಅವರಿಗೆ ಕೇವಲ ಎರಡೂವರೆ ತಿಂಗಳು ಮಾತ್ರ ಅಧಿಕಾರಾವಧಿ ದೊರೆಯುವ ಸಾಧ್ಯತೆ ಇದೆ.
ಮೇಯರ್, ಉಪ ಮೇಯರ್‌ಗಳು
ಮೊದಲ ಅವಧಿಯಲ್ಲಿ ಕಾಂಗ್ರೆಸ್‌ನ ಪುಷ್ಪಾಲತಾ ಜಗನ್ನಾಥ್ ಮೇಯರ್, ಜೆಡಿಎಸ್‌ನ ಶಫಿ ಅಹಮ್ಮದ್ ಉಪ ಮೇಯರ್, 2ನೇ ಅವಧಿಯಲ್ಲಿ ಜೆಡಿಎಸ್‌ನ ತಸ್ನಿಂ ಮೇಯರ್, ಕಾಂಗ್ರೆಸ್‌ನ ಸಿ.ಶ್ರೀಧರ್ ಉಪ ಮೇಯರ್, 3ನೇ ಅವಧಿಯಲ್ಲಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್, ಕಾಂಗ್ರೆಸ್‌ನ ಅನ್ವರ್ ಬೇಗ್ ಉಪ ಮೇಯರ್ ಆಗಿ ಆಯ್ಕೆಗೊಂಡರು. ಆದರೆ, ಚುನಾವಣಾ ಅಫಿಡವಿಟ್ ನಲ್ಲಿ ಆಸ್ತಿ ವಿವರ ಮರೆಮಾಚಿದ ಆರೋಪದ ಮೇರೆಗೆ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವವನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಉಪ ಮೇಯರ್‌ಅನ್ವರ್ ಬೇಗ್ ಅವರಿಗೆ ಮೇಯರ್‌ಆಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು. ನಂತರ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಗೊಂಡರು. 4ನೇ ಅವಧಿಗೆ ಬಿಜೆಪಿಯ ಶಿವಕುಮಾರ್ ಮೇಯರ್, ಬಿಜೆಪಿಯ ಡಾ.ಜಿ. ರೂಪಾ ಉಪ ಮೇಯರ್ ಅಗಿ ಆಯ್ಕೆಗೊಂಡರು.