ಜಿಲ್ಲೆ

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆ

ಮೈಸೂರು: ನಗರದ ಪ್ರತಿಷ್ಠಿತ ದಿ ಮೈಸೂರು ಕೋ-ಅಪರೇಟಿವ್ ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ 13 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಬ್ಯಾಂಕ್‌ನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ ಜ.19ರಂದು ಚುನಾವಣೆ ನಡೆದಿದ್ದು, ಶನಿವಾರ ಮತಗಳ ಎಣಿಕೆ ಪ್ರಕ್ರಿಯೆ ಜರುಗಿತು. ಚುನಾವಣಾಧಿಕಾರಿಯಾಗಿ ಬಿ.ರಾಜು ಕಾರ್ಯ ನಿರ್ವಹಿಸಿದರು.

ಸಾಮಾನ್ಯ ಕ್ಷೇತ್ರದಿಂದ ಜಿ.ಯೋಗೇಶ್ (5553), ಎಸ್‌ಬಿಎಂ ಮಂಜು (5285), ಎನ್.ಯೋಗಾನಂದ (4280), ಜಿ. ನಿರಂಜನ್ (4164), ಎಚ್.ಹರೀಶ್‌ಕುಮಾರ್ (4080), ಆರ್. ರವಿಕುಮಾರ್ ರಾಜಕೀಯ(4047), ಆರ್.ಸೋಮಣ್ಣ (3960) ಆಯ್ಕೆಯಾಗಿದ್ದಾರೆ.

ಮಹಿಳಾ ಮೀಸಲಿನಲ್ಲಿ ಪಿ.ರಾಜೇಶ್ವರಿ (3929), ಎಂ.ಪ್ರಮೀಳಾ (2993), ಹಿಂದುಳಿದ ವರ್ಗ ‘ಎ’ಯಿಂದ ಸಿ.ಚಂದ್ರಶೇಖರ (4012), ಹಿಂದುಳಿದ ವರ್ಗ ‘ಬಿ’ ಟಿ.ರವಿ (ಅವಿರೋಧ ಆಯ್ಕೆ), ಪರಿಶಿಷ್ಟ ಜಾತಿಯಿಂದ ಕೆ.ಗಿರೀಶ್ (2455), ಪರಿಶಿಷ್ಟ ಪಂಗಡದಿಂದ ಎಂ.ರಾಮಕೃಷ್ಣ (3183) ಆಯ್ಕೆಯಾಗಿದ್ದಾರೆ.

ಹಾಲಿ ಅಧ್ಯಕ್ಷೆ ರಾಜೇಶ್ವರಿ, ನಿರ್ದೇಶಕರಾಗಿದ್ದ ಎಸ್.ಬಿ.ಎಂ.ಮಂಜು, ಜೆ.ಯೋಗೇಶ್, ಎಂ.ರಾಮಕೃಷ್ಣ, ಎಚ್.ಹರೀಶ್‌ಕುಮಾರ್, ಆರ್.ರವಿಕುಮಾರ್ (ರಾಜಕೀಯ) ಮರು ಆಯ್ಕೆಯಾಗಿದ್ದಾರೆ.

ಮಾಜಿ ಅಧ್ಯಕ್ಷರಾಗಿದ್ದ ಕೆ.ಉಮಾಶಂಕರ್, ಸಿ.ರೇವಣ್ಣ, ಹಾಲಿ ಉಪಾಧ್ಯಕ್ಷೆ ಪಿ.ಸವಿತಾ, ಮಾಜಿ ನಿರ್ದೇಶಕ ಚಿಕ್ಕಪುಟ್ಟಿ ಸೇರಿದಂತೆ ಚುನಾವಣೆಯಲ್ಲಿ ಬಾರಿ ಸದ್ದು ಮಾಡಿದ್ದವರು ಪರಾಭವಗೊಂಡಿದ್ದಾರೆ.