ಸೋಮವಾರಪೇಟೆ: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2025-30ರ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಬಿ.ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಬಿ.ಜನಾರ್ದನ ಪ್ರಭು ಆಯ್ಕೆಯಾದರು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಮಧ್ಯಾಹ್ನ ಬ್ಯಾಂಕ್ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ವಿಜೇತರಾದ ಬಿ.ಬಿ.ಸತೀಶ್ ಮತ್ತು ಉಪಾಧ್ಯಕ್ಷ ಜನಾರ್ದನ ಪ್ರಭು ತಲಾ 8 ಮತಗಳನ್ನು ಗಳಿಸಿ ವಿಜೇತರಾದರು. ಇವರ ವಿರುದ್ಧ ಕಿರಗಂದೂರಿನ ಎಚ್.ಬಿ.ಶಿವಕುಮಾರ್ ಅಧ್ಯಕ್ಷರ ಸ್ಥಾನಕ್ಕೆ ಹಾಗೂ ಬಿ.ಎಂ.ಸುರೇಶ್ ಸ್ಪರ್ಧಿಸಿ ತಲಾ 7 ಮತಗಳನ್ನು ಗಳಿಸಿದರು. ಬ್ಯಾಂಕ್‌ನಲ್ಲಿ ಒಟ್ಟು 14 ಸದಸ್ಯರು ಹಾಗೂ ಒಬ್ಬರು ಸರ್ಕಾರದ ನಾಮನಿರ್ದೇಶನ ಸದಸ್ಯ ಸೇರಿ 15 ನಿರ್ದೇಶಕರಿದ್ದಾರೆ.
ಬ್ಯಾಂಕ್ ನಿರ್ದೇಶಕರಾದ ಟಿ.ಆರ್.ಪುರುಷೋತ್ತಮ್, ಎಂ.ಟಿ.ದಾಮೋದರ್, ಪಿ.ಸಿ.ಬೇಲಯ್ಯ, ಡಿ.ಭಗವಾನ್, ಬಿ.ಎನ್. ಮಂಜುನಾಥ್, ಕೆ.ಬಿ.ಕವಿತಾ, ಕೆ.ಜಿ. ಕುಮಾರಸ್ವಾಮಿ, ಎಸ್.ಪಿ.ಪೊನ್ನಪ್ಪ, ಬಿ.ಬಿ.ಆದರ್ಶ, ಬಿ.ಪಿ.ಸುಮಲತಾ, ಜಿ.ಆರ್. ತಮ್ಮಯ್ಯ ಇದ್ದರು.
ಚುನಾವಣಾಧಿಕಾರಿಯಾಗಿ ಜಿಲ್ಲಾ ಸಹಕಾರ ಇಲಾಖೆಯ ಅಧಿಕಾರಿ ಪಿ.ಆಶಾ ಕಾರ್ಯನಿರ್ವಹಿಸಿದರು. ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್ ಇದ್ದರು.