ಗಂಡಸಿ: ಜಿದ್ದಾಜಿದ್ದಿನಿಂದ ಕೂಡಿದ್ದ ಹೋಬಳಿಯ ಕೊಂಡೆ ನಾಳು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಶನಿವಾರ ನಡೆಯಿತು. ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು, ಜೆಡಿಎಸ್ ಬೆಂಬಲಿತ 6 ಅಭ್ಯರ್ಥಿಗಳು ಜಯಶಾಲಿಗಳಾಗಿದ್ದು, ಸಂಘದ ಅಧ್ಯಕ್ಷರ ಆಯ್ಕೆಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಮುಗಿದು, ಮತ ಎಣಿಕೆ ಕಾರ್ಯ 4 ಗಂಟೆಗೆ ಪ್ರಾರಂಭವಾಗಿ ರಾತ್ರಿ 8 ಮುಕ್ತಾಯವಾಗಿ ಫಲಿತಾಂಶ ಪ್ರಕಟಗೊಂಡಿತು. 12 ಸದಸ್ಯರ ಬಲದ ಕೊಂಡೆನಾಳು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಆಲದ ಹಳ್ಳಿ ರಂಗೇಗೌಡ, ಕೊಂಡೆ ನಾಳು ವಾಣಿ, ಕರಿಮಾರನಹಳ್ಳಿ ವಿಜಯಮ್ಮ, ಬಂಡಿಹಳ್ಳಿ ಶಿವಯ್ಯ, ಬಾಗಿವಾಳು ಗೋಪಾಲ್, ಆಲದಹಳ್ಳಿ ಮೋಹನ್ ಕುಮಾರ್(ಸ್ವಾಮಿ) ಹಾಗೂ ಜೆಡಿಎಸ್ ಬೆಂಬಲಿತ ಬಾಗಿವಾಳು ಗೀತಾ, ಬಸವರಾಜು ಬಿ.ಮಹೇಶ್‌ಗೌಡ, ಆಲದಹಳ್ಳಿ ನಂಜೇಶ್‌ಗೌಡ, ಪುಟ್ಟರಾಜು, ಕೊಂಡೆನಾಳು ಯೋಗೇಶ್ ಜಯಶೀಲರಾದರು. ಚುನಾವಣಾ ಅಧಿಕಾರಿಗಳಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ದೇವರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಸಿದ್ದಪ್ಪ ಕಾರ್ಯ ನಿರ್ವಹಿಸಿದರು.