ಹಲಗೂರು: ಸಮೀಪದ ಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ 11 ಸ್ಥಾನಗಳಿಗೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕರು ಆಯ್ಕೆಯಾದರು.
ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಣಸಮುದ್ರ ಗ್ರಾಮದ ರಾಮಚಂದ್ರ, ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಿ.ಹಲಸಹಳ್ಳಿ ಗ್ರಾಮದ ಎಸ್.ಸಿದ್ದಲಿಂಗೇಗೌಡ, ಬಾಣಸಮುದ್ರ ಗ್ರಾಮದ ಶ್ರೀಧರ್, ಧನಗೂರು ಡಿ.ಎಫ್.ಫಾರೂಕ್ ಪಾಷಾ, ದಬ್ಬಹಳ್ಳಿ ಬಿ.ಜಯರಾಮೇಗೌಡ, ಧನಗೂರು ಸಿ.ದೊಡ್ಡಸ್ವಾಮಿ, ಪರಿಶಿಷ್ಟ ಜಾತಿ ಸಾಮಾನ್ಯ ಕ್ಷೇತ್ರದಿಂದ ಡಿ.ಹಲಸಹಳ್ಳಿ ಎಚ್.ಎಂ.ನಾಗರಾಜು, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬಾಣಸಮುದ್ರ ಗ್ರಾಮದ ಕೆ.ಗೀತಾ, ಡಿ.ಹಲಸಹಳ್ಳಿ ಕೆ.ಎಂ.ಮೈತ್ರಿ ಆಯ್ಕೆಯಾದರು.
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಡಿ.ಹಲಸಹಳ್ಳಿ ಗ್ರಾಮದ ಎಚ್.ಸಿದ್ದಾಚಾರಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಾಣಸಮುದ್ರ ಪುಟ್ಟಸ್ವಾಮಿ, ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಿ.ಆಶಾ ಮತ್ತು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಬಿ.ರವಿಚಂದ್ರ ಘೋಷಣೆ ಮಾಡಿದರು.
ಮುಖಂಡರಾದ ಎನ್.ಎಸ್. ಗುಣೇಶ್, ಪುಟ್ಟಸ್ವಾಮಿ, ಬಿ.ಆರ್.ಬಸವರಾಜು, ಬಿ.ಎಸ್.ಮಲ್ಲೇಶ್, ಇ.ಸುರೇಶ್, ಸಿದ್ದಪ್ಪ, ವೆಂಕಟೇಶ್, ಲೋಕೇಶ್, ನಾಗಾರ್ಜುನ, ನೌಕರ ರಾಚಯ್ಯ ಇತರರು ಇದ್ದರು.