ಜಿಲ್ಲೆ

ವಿಡಿಯೋಗ್ರಾಫರ್‌ಗಳಿಗೆ ಚುನಾವಣೆ ಹಣ ಬಾಕಿ

Avinash R

ಕಾಸರಗೋಡು: ಲೋಕಸಭಾ ಚುನಾವಣೆ ಸಂದರ್ಭ ಕಾಸರಗೋಡು ಜಿಲ್ಲೆಯ ವಿವಿಧ ಸ್ಕ್ವಾಡ್‌ಗಳು ಮತ್ತು ಚುನಾವಣಾ ಬೂತ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ವೀಡಿಯೋಗ್ರಾಫರ್‌ಗಳಿಗೆ ತಿಂಗಳುಗಳು ಕಳೆದರೂ ಸಂಭಾವನೆ ಪಾವತಿಯಾಗದಿರುವುದನ್ನು ಪ್ರತಿಭಟಿಸಿ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟರೇಟ್ ಎದುರು ಧರಣಿ ನಡೆಸಲಾಯಿತು.

ಶಾಸಕ ಎನ್.ಎ ನೆಲ್ಲಿಕುನ್ನು ಧರಣಿ ಉದ್ಘಾಟಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಚುನಾವಣೆ ಸಂದರ್ಭ ಮೂರು ತಿಂಗಳಿಗೂ ಹೆಚ್ಚುಕಾಲ ಜಿಲ್ಲೆಯಲ್ಲಿ 1,600 ಮಂದಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, 45 ಲಕ್ಷ ರೂ.ಮೊತ್ತ ಸಂಭಾವನೆ ರೂಪದಲ್ಲಿ ಅಖಿಲ ಕೇರಳ ಫೋಟೋಗ್ರಾಫರ್ಸ್ ಒಕ್ಕೂಟ(ಎಕೆಪಿಎ) ಸದಸ್ಯರಿಗೆ ಲಭಿಸಲು ಬಾಕಿಯಿದೆ.

ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಜಿಲ್ಲಾ ಕಾರ್ಯದರ್ಶಿ ಸುಗುಣನ್ ಟಿ.ವಿ., ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಕೆ.ವಿ, ಜಿಲ್ಲಾ ಕೋಶಾಧಿಕಾರಿ ಸುನೀಲ್ ಕುಮಾರ್ ಪಿ.ಟಿ., ಜಿಲ್ಲಾ ಉಪಾಧ್ಯಕ್ಷ ಶರೀಫ್ ಫ್ರೇಮ್ ಆರ್ಟ್, ವೇಣು ವಿ.ವಿ., ಜತೆ ಕಾರ್ಯದರ್ಶಿ ಪ್ರಜಿತ್ ಕಲರ್ ಪ್ಲಸ್, ಅಶೋಕನ್ ಕೆ., ಕಾಸರಗೋಡು ವಲಯ ಅಧ್ಯಕ್ಷ ವಾಸು ಎ., ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ, ಕಾಞಂಗಾಡು ವಲಯ ಕಾರ್ಯದರ್ಶಿ ಪ್ರಜೀಶ್, ರಾಜಪುರಂ ವಲಯ ಕಾರ್ಯದರ್ಶಿ ರಾಜೀವನ್ ಪಿ., ನೀಲೇಶ್ವರಂ ವಲಯ ಕಾರ್ಯದರ್ಶಿ ಪ್ರಭಾಕರ ತರಂಗಿಣಿ ಉಪಸ್ಥಿತರಿದ್ದರು. ಜಿಲ್ಲಾ ಜತೆ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್.ಸ್ವಾಗತಿಸಿದರು. ಜಿಲ್ಲಾ ಪಿಆರ್‌ಒ ಅನೂಪ್ ಚಂದೇರ ವಂದಿಸಿದರು.