ಜಿಲ್ಲೆ

ನಿಂಬಳಗೆರೆ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

ಉಜ್ಜಿನಿ: ಸಮೀಪದ ನಿಂಬಳಗೆರೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘಕ್ಕೆ ಸೋಮವಾರ ಆಯೋಜಿಸಿದ್ದ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಿಂದ 12 ಸ್ಥಾನಗಳಿಗೆ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಂ. ಜಿ. ರಾಜಕುಮಾರ, ವೈ.ಸುರೇಶ, ಎಚ್.ಚನ್ನಪ್ಪ, ಸಣ್ಣ ತಿಪ್ಪಯ್ಯ, ಯು.ಎಂ. ಮಹಂತೇಶ, ಕೆ.ಬಸವರಾಜ, ಬಿ.ರೇಖಾ, ಎನ್.ಕಲ್ಲೇಶ, ಕೆ.ನೀಲಮ್ಮ, ಎ.ಶರಣಪ್ಪ, ಕೆ.ಪತ್ರೆಪ್ಪ, ಎಸ್.ಬಸಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಬಿ.ನಾಗರಾಜ ತಿಳಿಸಿದರು.