ಜಿಲ್ಲೆ

ಕನಸವಾಡಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಕೈ ಬಲ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಮಧುರೆ

ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕನಸವಾಡಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಚುನಾವಣಾ ಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ 12 ಮಂದಿ ನಿರ್ದೇಶಕರಾಗಿ ಗೆಲುವು ಸಾಧಿಸಿದ್ದಾರೆ. ೆ.27ರಂದು ಚುನಾವಣೆ ನಡೆದಿತ್ತು.

ಕಳೆದ 25 ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. 25 ವರ್ಷಗಳಿಂದಲೂ ಸೊಸೈಟಿ ಅಭಿವೃದ್ಧಿಗಾಗಿ ಅವಿರೋಧ ಆಯ್ಕೆ ನಿರ್ಧಾರ ಕೈಗೊಂಡು ಚುನಾವಣೆ ಕೈಬಿಡಲಾಗುತ್ತಿತ್ತು. ಆದರೆ ಈ ಬಾರಿ ಶಾಸಕ ಧೀರಜ್ ಮುನಿರಾಜ್ ಚುನಾವಣೆ ಮಾಡಲೇಬೇಕು ಎಂದು ನಿರ್ಧಾರ ಮಾಡಿದರು. ಈ ಚುನಾವಣೆಯಲ್ಲಿ ನಾವೇ ಗೆದ್ದಿದ್ದೇವೆ ಎಂದು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಹೇಳಿದರು.

ಸೊಸೈಟಿ 1 ಕೋಟಿ ರೂ.ಲಾಭದಲ್ಲಿದೆ: ತಾಲೂಕಿನಲ್ಲಿ 15 ವರ್ಷಗಳಿಂದೆ ಸೊಸೈಟಿಗಳು ಇರಲಿಲ್ಲ. ಇಂದು 28 ಸೊಸೈಟಿ ಮಾಡಿದ್ದೇವೆ. ಪ್ರತಿ ಸೊಸೈಟಿಗಳಿಂದ ರೈತರಿಗೆ ಕನಿಷ್ಟ 5 ಕೋಟಿ ರೂ.ಸಾಲ ನೀಡಿದ್ದೇವೆ. ಸರ್ಕಾರದಿಂದ ಎರಡೆರಡು ಬಾರಿ 100 ಕೋಟಿಯಷ್ಟು ಸಾಲ ಮನ್ನಾ ಆಗಿದೆ. ಕನಸವಾಡಿ ಸೊಸೈಟಿ ಸುಮಾರು 1 ಕೋಟಿ ರೂ. ಲಾಭದಲ್ಲಿದೆ. ಆ ಲಾಭವನ್ನು ಸೊಸೈಟಿ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದೇವೆ ಎಂದು ಚುಂಚೇಗೌಡ ಹೇಳಿದರು. ಸೊಸೈಟಿಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸೊಸೈಟಿಗಳಿಗಾಗಿ ಇಂತಹ 8 ನೂತನ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಕಟ್ಟಡಗಳ ನಿರ್ಮಾಣಕ್ಕೆ ಒಂದು ರೂಪಾಯಿ ಸೊಸೈಟಿ ಹಣ ಬಳಕೆ ಮಾಡುತ್ತಿಲ್ಲ. ಎಂಎಲ್ಎ ಅನುದಾನ, ಎಂಎಲ್ಸಿ ಅನುದಾನ, ಜಿಲ್ಲಾ ಬ್ಯಾಂಕ್, ಅಕ್ಸ್ ಬ್ಯಾಂಕ್ ಸೇರಿ ಇತರೆ ಮೂಲಗಳಿಂದ ಅನುದಾನ ಬಳಸಲಅಗಿದೆ. ಇನ್ನೂ 5 ಕಟ್ಟಡಗಳಿಗೆ ಅಡಿಪಾಯ ಹಾಕಲಾಗಿದೆ ಎಂದರು. ಹೊನ್ನಾವರ ಹಾಗೂ ಕನಸವಾಡಿ ಗ್ರಾಮ ಪಂಚಾಯಿತಿಯ ಮತದಾರರು ಸೇರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಳನ್ನು ಗೆಲ್ಲಿಸಿದ್ದಾರೆ. ಎಲ್ಲರಿಗೂ ನಾವು ಚಿರ ಋಣಿಯಾಗಿ ಇರುತ್ತೇವೆ ಎಂದರು.

ಪಟಾಕಿ ಸಿಡಿಸಿ ಸಂಭ್ರಮ: ಸೊಸೈಟಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಗಣ್ಯರು ಸೇರಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹೂವಿನಾರ ಹಾಕಿ, ಸಿಹಿ ತಿನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡರ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಈ ಚುನಾವಣೆಯಲ್ಲಿ ಹೆಚ್ಚು ಮತಗಳ ಅಂತರಿಂದ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. ಇದೇ ಮೊದಲ ಚುನಾವಣೆಯಲ್ಲಿ ಮೊದಲ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಇಚ್ಚಿಸುತ್ತೇನೆ. ಮುಂದೆ ಚುಂಚೇಗೌಡರ ನೇತೃತ್ವದಲ್ಲಿ ಸೊಸೈಟಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವತ್ತ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ.

ಮಂಜುನಾಥ್, ಕನಸವಾಡಿ ವ್ಯವಸಾಯ ಸೇವಾ ಸಹಕಾರ ಸಂಘ