election 
ಜಿಲ್ಲೆ

ನಡವತ್ತಿ ಡೇರಿಗೆ ಚಂದ್ರಶೇಖರ್ ಅಧ್ಯಕ್ಷ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನ ಕಸಬಾ ಹೋಬಳಿಯ ನಡವತ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎನ್.ಎಂ.ಚಂದ್ರಶೇಖರ್ ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆಯಾದರು.
ಒಟ್ಟು 13 ಸಂಖ್ಯಾಬಲ ಹೊಂದಿರುವ ಸಂಘದಲ್ಲಿ ಚಂದ್ರಶೇಖರ್‌ಗೆ 9 ಮತ ಹಾಗೂ ಮಂಜುನಾಥ್ ಪರ 4 ಮತ ಲಭಿಸಿದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರನ್ನು ವಿಜಯಿ ಎಂದು ಘೋಷಣೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗಭೂಷಣ್ ತಿಳಿಸಿದರು.
ನೂತನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರೈತರಿಗೆ ಅನುಕೂಲವಾಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ರೈತರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ನೆರವಾಗುವ ಯೋಜನೆಯನ್ನು ನೀಡುತ್ತೇವೆ. ಹಾಲು ಉತ್ಪಾದಕರ ಕಷ್ಟಗಳಿಗೆ ಧ್ವನಿಯಾಗಿ, ಹೈನುಗಾರಿಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ನೂತನ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಮುಖಂಡರಾದ ಕೋಡಿಹಳ್ಳಿ ಸುರೇಶ್, ಎಲ್.ಆಂಡ್ ಟಿ.ಮಂಜುನಾಥ್, ಪಿಎಲ್‌ಡಿ ಮಾಜಿ ಅಧ್ಯಕ್ಷ ಸುನಿಲ್, ಹೊಸಕೋಟೆ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣಗೌಡ ಸನ್ಮಾನಿಸಿದರು.
ಮುಖಂಡರಾದ ವೆಂಕಟೇಶಪ್ಪ, ಅವಿನಾಶ್‌ಗೌಡ, ವಿಜಯಕುಮಾರ್ ಮತ್ತಿತರರಿದ್ದರು.