ದೊಡವಾಡ: ಗ್ರಾಮದ ಜನರ ನಿರೀೆಗೆ ತಕ್ಕಂತೆ ಚುನಾಯಿತ ಸದಸ್ಯರು ಕೆಲಸ ಮಾಡಬೇಕು ಹಾಗೂ ಗ್ರಾಮದ ಸಮಗ್ರ ಅಭಿವದ್ಧಿಗೆ ಶ್ರಮವಹಿಸಿ ದುಡಿಯಬೇಕು ಎಂದು ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ ಹೇಳಿದರು.
ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಬುಧವಾರ ಗ್ರಾಪಂ ಹಾಗೂ ಸಂಗಮೇಶ್ವರ ಪಿಕೆಪಿಎಸ್ ಚುನಾವಣೆಯಲ್ಲಿ ಆಯ್ಕೆಯಾದ 19 ಎನ್ಡಿಎ ಬೆಂಬಲಿತರಿಗೆ ಜೆಡಿಎಸ್ ಯುವ ಜನತಾದಳದ ಬೆಳಗಾವಿ ಜಿಲ್ಲಾ ಅಧ್ಯ ಸುನೀಲ ವರ್ಣೆಕರ ವತಿಯಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮದ ಜನರ ವಿಶ್ವಾಸವನ್ನು ಚುನಾಯಿತರು ಉಳಿಸಿಕೊಳ್ಳಬೇಕು ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಕೆಪಿಎಸ್ ನಿರ್ದೇಶಕ ನಿಂಗಪ್ಪ ಚೌಡನ್ನವರ ಮಾತನಾಡಿ, ದೊಡವಾಡದ ಅಭಿವದ್ಧಿಗೆ ಸದಸ್ಯರು ಯಾವುದೇ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಪಂಗೆ ಆಯ್ಕೆಯಾದ ಸದಸ್ಯರಾದ ಬಸವರಾಜ ಅಸುಂಡಿ, ಸುರೇಶ ಮುರೆನ್ನವರ, ಮಂಜುನಾಥ ಅಕ್ಕಿ, ಮಹಾಂತೇಶ ಅಸುಂಡಿ, ವಿಜಯಾ ಪಾಟೀಲ, ಕಾಶವ್ವ ಶಿವದೂತ್ತನ್ನವರ, ಸುವರ್ಣಾ ಏಳಲ್ಲಿ, ಶಮಶಾದಭಿ ಹುಣಶಿಕಟ್ಟಿ, ಸಂಗೀತಾ ಚಂದರಗಿ, ಕಂತವ್ವ ಗೇಟಿ, ಸಂಗಮೇಶ್ವರ ಪಿಕೆಪಿಎಸ್ ಸದಸ್ಯರಾದ ಬಸವರಾಜ ಮುರಗೋಡ ಅಜ್ಜಪ್ಪ ಪಟಾತ, ಗುರುನಾಥ ಕಾರಕೋನ, ಗಿರೀಶ ಧಾರವಾಡ, ಲಕ್ಕಪ್ಪ ಅಲಕನ್ನವರ, ಗದಿಗೆಪ್ಪ ದೊಡಮನಿ, ಲಲಿತಾ ಹತ್ತಿಕಟಗಿ, ಪಾರ್ವತಿ ಮುದೇನ್ನವರ, ತಾಪಂ ಮಾಜಿ ಸದಸ್ಯ ಸಂಗಯ್ಯ ದಾಬಿಮಠ ಹಾಗೂ ಗ್ರಾಮಸ್ಥರಿದ್ದರು.