ತಿ.ನರಸೀಪುರ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಮಹಾಸಭಾ ಸಭೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಕೆ.ಕಿರಣ್ ಅವರನ್ನು ಸನ್ಮಾನಿಸಲಾಯಿತು. ಸಿ.ಎಂ.ಪ್ರಕಾಶ್, ಬಿ.ಎಂ.ಶಿವಮಲ್ಲಪ್ಪ, ಅಂಬಿಕಾ ಲೋಕೇಶ್, ಶಿವಶಂಕರ್, ನಿರ್ದೇಶಕರಾದ ಕೆ.ಎಂ.ಮಲ್ಲು, ಸುಗಂಧರಾಜು, ಪರಮೇಶ್ ಪಟೇಲ್, ವಿಜಯಕುಮಾರ್ ಇದ್ದರು. 
ಜಿಲ್ಲೆ

ವೀರಶೈವ ಮಹಾಸಭಾ ತಾಲೂಕು ಘಟಕ ಉಪಾಧ್ಯಕ್ಷರಾಗಿ ಆಯ್ಕೆ

ತಿ.ನರಸೀಪುರ: ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ನೂತನ ಉಪಾಧ್ಯಕ್ಷರನ್ನಾಗಿ ಎಸ್.ಕೆ.ಕಿರಣ್ ಅವರನ್ನು ಆಯ್ಕೆ ಮಾಡಲಾಯಿತು.

ವೀರಶೈವ ಮಹಾಸಭಾ ಸಂಘಟನೆಗೆ ಬಲವನ್ನು ತುಂಬಲು ಪುರಸಭೆ ಹಾಲಿ ಸದಸ್ಯರಾಗಿರುವ ಎಸ್.ಕೆ.ಕಿರಣ್ ಅವರನ್ನು ವಿವಿಧ ಮಠ, ಮಾನ್ಯಗಳ ಹರ-ಗುರು ಚರಮೂರ್ತಿಗಳ ಸಲಹೆ ಸೂಚನೆಯಂತೆ ಹಾಗೂ ಮಹಾಸಭಾ ಪದಾಧಿಕಾರಿಗಳ ಒಪ್ಪಿಗೆಯನ್ನು ಪಡೆದು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಸನ್ಮಾನಿಸಲಾಯಿತು.

ನೂತನ ಉಪಾಧ್ಯಕ್ಷರಾದ ಬಳಿಕ ಎಸ್.ಕೆ.ಕಿರಣ್ ಮಾತನಾಡಿ, ಮಹಾಸಭಾ ಕಾರ್ಯಚಟುವಟಿಕೆಯಲ್ಲಿ ಕ್ರಿಯಾಶೀಲನಾಗಿ, ಸಮುದಾಯದ ಹಿತವನ್ನು ಕಾಪಾಡಲು ಎಲ್ಲರೊಟ್ಟಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇನೆ. ವೀರಶೈವ ಲಿಂಗಾಯತ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ರೂಪಿಸಲು ಸದಾಕಾಲ ಚಿಂತನೆ ಮಾಡುತ್ತೇನೆ ಎಂದು ತಿಳಿಸಿದರು.

ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್ ಮಾತನಾಡಿ, ಸಮುದಾಯದ ಸಂಘಟನೆಯ ಜವಾಬ್ದಾರಿಯನ್ನು ಯುವಕರಿಗೆ ನೀಡಬೇಕು. ಸಮುದಾಯದ ಮುಂದಾಳತ್ವವನ್ನು ವಹಿಸಿಕೊಳ್ಳಲು ಯುವಕರು ಮುಂದೆ ಬರಲು ಕಿರಣ್ ಅವರು ಸ್ಫೂರ್ತಿಯಾಗಲಿ ಎಂಬ ಉದ್ದೇಶದಿಂದ ಪುರಸಭೆ ಸದಸ್ಯರಾದ ಅವರಿಗೆ ಮಹಾಸಭಾ ಉಪಾಧ್ಯಕ್ಷ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಮಹಾಸಭಾದ ಉಪಾಧ್ಯಕ್ಷರಾದ ಬಿ.ಎಂ.ಶಿವಮಲ್ಲಪ್ಪ, ಅಂಬಿಕಾ ಲೋಕೇಶ್, ಪ್ರಧಾನ ಕಾರ್ಯದರ್ಶಿ ಕುರುಬೂರು ಶಿವು, ನಿರ್ದೇಶಕರಾದ ಕೆ.ಎಂ.ಮಲ್ಲು, ಶಂಭುದೇವನಪುರ ಸುಗಂಧರಾಜು, ಪರಮೇಶ್ ಪಟೇಲ್, ಬೆನಕನಹಳ್ಳಿ ವಿಜಯಕುಮಾರ್, ಮುಖಂಡರಾದ ಹಿರಿಯೂರು ನವೀನ್, ನಾಗೇಶ್, ಪ್ರಭು, ಸಂತೋಷ್, ಕೈಯಂಬಳ್ಳಿ ಅಶೋಕ್, ಸಂತೋಷ್, ಮಂಜು, ಪಿಂಕು, ಮಾಯಪ್ಪ ಹಾಗೂ ಇತರರು ಇದ್ದರು.