ಸುಳ್ಯ: ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಕಿಶೋರಿ ಶೇಟ್ ಆಯ್ಕೆಯಾಗಿದ್ದಾರೆ. ಕಿಶೋರಿ ಶೇಟ್ ಹೆಸರನ್ನು ಸದಸ್ಯೆ ಪ್ರವೀತಾ ಪ್ರಶಾಂತ್ ಸೂಚಿಸಿದರೆ, ಸದಸ್ಯ ಸುಧಾಕರ ಕುರುಂಜಿಭಾಗ್ ಅನುಮೋದಿಸಿದರು. ಕಿಶೋರಿ ಶೇಟ್ ಕಳೆದ ವರ್ಷ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಪಂಚಾಯಿತಿ ಅಧ್ಯಕ್ಷತೆಯ ಅವಧಿ ಪೂರ್ಣಗೊಂಡಿತ್ತು. ಆದ್ದರಿಂದ ಕಿಶೋರಿ ಶೇಟ್ ಅವರಿಗೆ ಪೂರ್ಣಾವಧಿ ಅಧಿಕಾರ ಸಿಕ್ಕಿರಲಿಲ್ಲ. ಇದೀಗ ಮತ್ತೆ ಕಿಶೋರಿ ಶೇಟ್ ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ.