ಜಿಲ್ಲೆ

ಮಹಿಳಾ ಪುನಶ್ಚೇತನ ಕೇಂದ್ರದಿಂದ ವೃದ್ಧೆ ನಾಪತ್ತೆ

ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಪ್ರಿಯದರ್ಶಿನಿ ಮಹಿಳಾ ಪುನಶ್ಚೇತನ ಕೇಂದ್ರದಿಂದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ.

ಶಕುಂತಲಾ(60) ಕಾಣೆಯಾಗಿರುವವರು. ಅವರು ಮಾನಸಿಕ ಅಸ್ವಸ್ಥತೆಯಾಗಿದ್ದಾರೆ. ನ.10 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪಟ್ಟಣದ ಪ್ರಿಯದರ್ಶಿನಿ ಮಹಿಳಾ ಪುನಶ್ಚೇತನ ಕೇಂದ್ರಕ್ಕೆ ಶಕುಂತಲಾ ಅವರನ್ನು ತಾತ್ಕಾಲಿಕ ಆಶ್ರಯ ನೀಡಲು ದಾಖಲು ಮಾಡಿದ್ದರು. ಆದರೆ, ನ.16 ರಂದು ರಾತ್ರಿ ಕೇಂದ್ರದಿಂದ ನಾಪತ್ತೆಯಾಗಿದ್ದಾರೆ. ಕೇಂದ್ರದ ಅಶ್ವಿನಿ ಅವರು ನೀಡಿದ ದೂರಿನ ಆಧಾರದ ಮೇಲೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.