ಹಾರೋಹಳ್ಳಿ: ಹಸು ಮೇಯಿಸುತ್ತಿದ್ದ ವೃದ್ಧ ಕಾಡಾನೆ ದಾಳಿಗೆ ಮೃತಪಟ್ಟಿದ್ದಾನೆ. ತಾಲೂಕಿನ ದೊಡ್ಡೂರು ಗ್ರಾಮದ ವೆಂಕಟಾಚಲಯ್ಯ (65) ಮೃತಪಟ್ಟವರು.
ವೆಂಕಟಚಲಯ್ಯ ಬುಧವಾರ ಹಸುಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದಾಗ ಒಂಟಿ ಸಲಗ ದಾಳಿ ಮಾಡಿ, ವೃದ್ಧನನ್ನು ತುಳಿದಿದ್ದು, ಗಂಭೀರ ಗಾಯಗೊಂಡ ವೆಂಕಟಾಚಲಯ್ಯ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಇನ್ನು ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು, 2 ವರ್ಷಗಳಲ್ಲಿ ಆನೆದಾಳಿಯಿಂದ ನಾಲ್ಕು ಸಾವು ಸಂಭವಿಸಿದ್ದರೂ ಆನೆ&ಮಾನವ ಸಂರ್ಷಕ್ಕೆ ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ವೃದ್ಧನ ಸಾವಿಗೆ ಶ್ರೀವೇ ಪರಿಹಾರ ಒದಗಿಸಬೇಕು ಹಾಗೂ ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದಲ್ಲದೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ವೆಂಕಟಚಲಯ್ಯ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಮೃತದೇಹವನ್ನು ಸದ್ಯ ಹಾರೋಹಳ್ಳಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.