ಜಿಲ್ಲೆ

ಬಸ್ ಡಿಕ್ಕಿ ಹೊಡೆದು ವೃದ್ಧ ಸಾವು

ಹಲಗೂರು: ಬಸ್ ಡಿಕ್ಕಿ ಹೊಡೆದು ವೃದ್ಧರೊಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಸಾವಂದಿಪುರ ಗ್ರಾಮ ನಿವಾಸಿ ಸಣ್ಣೇಗೌಡ(85) ಮೃತರು. ಕಾರ್ಯ ನಿಮಿತ್ತ ಸ್ವಗ್ರಾಮದಿಂದ ಸಾಮಂದಿಪುರ ಗ್ರಾಮದಲ್ಲಿ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಹಲಗೂರು ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಸಣ್ಣೇಗೌಡ ಅವರನ್ನು ಕೆ.ಎಂ.ದೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.