ಮಸ್ಕಿಯಲ್ಲಿ ಕಲ್ಗುಡಿ ಚೌಡೇಶ್ವರಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ವಕೀಲ ಆರ್.ಕೆ.ಹಿರೇಮಠ, ದಾನಿಗಳಾದ ಶಂಕ್ರಪ್ಪ ಜೋಗಿನ್, ಉಡುಪಿಯ ಕಲಾವಿದೆ ಕಲಾವತಿ ಇದ್ದರು. 
ಜಿಲ್ಲೆ

ಹಿರಿಯರಿಗೆ ಗೌರವ ಕೊಡಿ

Kopala - Desk - Eraveni

ಮಸ್ಕಿ: ಯುವಕರಿಗೆ ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದ್ದು, ಗೌರವಿಸಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು. ಕಲ್ಗುಡಿ ಚೌಡೇಶ್ವರಿ ಜಾತ್ರೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಶಂಕ್ರಪ್ಪ ಜೋಗಿನ್ ಮತ್ತು ಅವರ ಸಹೋದರ ಶಿಕ್ಷಣಕ್ಕಾಗಿ ಭೂದಾನ, ಚೌಡೇಶ್ವರಿ ದೇವಿಗೆ ರಥ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಅವರ 75ನೆ ಜನ್ಮದಿನ ಹಾಗೂ 50ನೇ ವರ್ಷದ ದಾಂಪತ್ಯ ಜೀವನದ ಸವಿನೆನಪಿಗೆ 101 ಬಡ ಜನರಿಗೆ ವಸ್ತ್ರ ವಿತರಣೆ ಮಾಡುವ ಮೂಲಕ ಸಮಾಜದಲ್ಲಿ ಉಳ್ಳವರು ದಾನ ಮಾಡುವ ಸಂಸ್ಕೃತಿ ಬೆಳೆಸುವಂತಹ ಕೆಲಸ ಮಾಡಿದ್ದಾರೆ ಎಂದರು.

ವಕೀಲ ಆರ್.ಕೆ.ಹಿರೇಮಠ ಮಾತನಾಡಿದರು. ಶಂಕ್ರಪ್ಪ ಜೋಗಿನ್ ದಂಪತಿಯನ್ನು ದೇವಾಂಗ ಸಮಾಜದ ಮುಖಂಡರು ಸತ್ಕರಿಸಿದರು. ಉಡುಪಿಯ ಕಲಾವಿದೆ ಕಲಾವತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.