ಸೋಮವಾರಪೇಟೆ: ಸೋಮವಾರಪೇಟೆ ಸಂಬಾರ ಮಂಡಳಿಯಿಂದ ಏಲಕ್ಕಿ ತೋಟದ ಅಭಿವೃದ್ದಿ ಪಡಿಸುವ ವಿವಿಧ ಯೋಜನೆಗಳಲ್ಲಿ ಸಹಾಯಧನಕ್ಕಾಗಿ ಬೆಳೆಗಾರರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಮಂಡಳಿಯ ಕ್ಷೇತ್ರಾಧಿಕಾರಿ ಎನ್.ಬಿ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಲಕ್ಕಿ ಮರುನಾಟಿ ಯೋಜಗೆ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. 2024-25 ನೇ ಸಾಲಿನ ಪಹಣಿ, ತೋಟದ ನಕಾಶೆ, ಏಲಕ್ಕಿ ಸಿಆರ್‌ಸಿ ಅಥವಾ ತೋಟಗಾರಿಕೆ ಇಲಾಖೆಯಿಂದ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಏಲಕ್ಕಿ ನರ್ಸರಿ ಯೋಜನೆ ಆಧಾರ್ ಕಾರ್ಡ್, ಜೆರಾಕ್ಸ್ ಪ್ರತಿ ನೀಡಬೇಕು.
2024-25 ನೇ ಸಾಲಿನ ಪಹಣಿ ನೀಡಬೇಕು.ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ಕ್ಲೀನರ್, ಗ್ರೇಡರ್ ಯೋಜನೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. 2024-25 ನೇ ಸಾಲಿನ ಪಹಣಿ. ಅನುಮೋದಿತ ತಯಾರಕರಿಂದ ಕ್ವಟೇಷನ್ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಚೇರಿ ಮೊ:9448997011 ಸಂಪರ್ಕಿಸಬಹುದು.ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9 ಕೊನೆಯ ದಿನ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.