ಜಿಲ್ಲೆ

ಏಕತಾ ರ‌್ಯಾಲಿಗೆ ಚಾಲನೆ

reportermys

ಮಡಿಕೇರಿ: ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಕೊಡಗು, ಜಿಲ್ಲಾ ಯುವ ಒಕ್ಕೂಟ, ಕೊಡಗು ತಾಲೂಕು ಯುವ ಒಕ್ಕೂಟ ಮಡಿಕೇರಿ ಎಫ್.ಎಂ.ಕೆ.ಎಂ.ಸಿ ಕಾಲೇಜು ಮಡಿಕೇರಿ, ಅಂಚೆ ಇಲಾಖೆ ಮಡಿಕೇರಿ ಇವರ ಸಂಯುಕ್ತಶ್ರಯದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮ ದಿನಾಚರಣೆಯ ಅಂಗವಾಗಿ ಏಕತಾ ರ‌್ಯಾಲಿ ನಗರದ ಕೋಟೆ ಆವರಣದಲ್ಲಿ ನಡೆಯಿತು.


ಕ್ರೈಂ ಪೊಲೀಸ್ ಇಲಾಖೆ ಪಿಎಸ್‌ಐ ರಾಧಾರವರು ರ‌್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಏಕತಾ ಪ್ರತಿಜ್ಞಾ ವಿಧಿಯನ್ನು ಭೋಧಿಸಲಾಯಿತು. ಏಕತಾರ‌್ಯಾಲಿ ಕೋಟೆಯಿಂದ ಪ್ರಾರಂಭಗೊಂಡು ಹಳೆ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪತ್ರಿಕಾ ಭವನ, ಹೊಸ ಬಸ್ ನಿಲ್ದಾಣಕ್ಕಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜುವಿನಲ್ಲಿ ಸಮಾಪ್ತಿಗೊಂಡಿತ್ತು.


ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಡಿಕೇರಿ ತಾಲೂಕು ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಅಂಚೆ ಪಾಲಕ ಟಿ.ಪಿ.ಶ್ರೀನಿವಾಸ್, ಪೊಲೀಸ್ ಇಲಾಖೆ ಮಡಿಕೇರಿ ನಗರ ಠಾಣಾ ಸಿಬ್ಬಂದಿಗಳಾದ ಎ.ಪಿ.ಗಣಪತಿ, ಸಿ.ವಿ.ರವಿ, ಸುನಿಲ್ ರಾಷ್ಟ್ರೀಯ ಯುವ ಕಾರ್ಯಕರ್ತ ಜಿ.ಪಿ.ರಂಜಿತ ಹಾಗೂ ಲಕ್ಷ್ಮಿಕಾಂತ್, ಜಿಲ್ಲಾ ಯುವ ಒಕ್ಕೂಟ ಪದಾಧಿಕಾರಿಗಳು ಅಂಚೆ ಇಲಾಖೆ ಸಿಬ್ಬಂದಿಗಳು, ರಾಷ್ಟ್ರೀಯ ಸೇವಾ ಯೋಜನೆ ಸಿಬ್ಬಂದಿ, ಎಫ್.ಎಂ.ಕೆ.ಎಂ.ಸಿ ಘಟಕದ ಶಿಬಿರಾಧಿಕಾರಿ ಗಾಯಿತ್ರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.