ಗುಳೇದಗುಡ್ಡದಲ್ಲಿ ಏಕಲ್ ಅಭಿಯಾನ ನಡೆಯಿತು. 
ಜಿಲ್ಲೆ

ಏಕಲ್ ಅಭಿಯಾನ ಜಾಥಾಗೆ ಚಾಲನೆ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ದೇಶದಲ್ಲಿ ಬಹಳಷ್ಟು ಜನರು ಪ್ರಾಥಮಿಕ ಶಾಲಾ ಹಂತದ ಶಿಕ್ಷಣ ಪಡೆದಿಲ್ಲ. ಅನೇಕ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ವಿದ್ಯಾಭ್ಯಾಸದ ಅರಿವಿಲ್ಲದೆ ಶಾಲೆ ಬಿಟ್ಟ ಮಕ್ಕಳು ಅಕ್ಷರ ಜ್ಞಾನ ಪಡೆಯಲು, ಅವರ ಉತ್ತಮ ಆರೋಗ್ಯ ಹಾಗೂ ಸಮಾಜದ ಅಭ್ಯುದಯಕ್ಕಾಗಿ ಏಕಲ್ ವಿದ್ಯಾ ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಡಾ.ವಿ.ಎ ಬೆನಕನಾಳ ಹೇಳಿದರು.

ಪಟ್ಟಣದ ಹರದೊಳ್ಳಿ ಮಾರುತೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಏಕಲ್ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಏಕಲ್ ರಥಯಾತ್ರೆಯಲ್ಲಿ ಕುಂಭಹೊತ್ತ ಸುಮಂಗಲೆಯರು ಭಾಗವಹಿಸಿದ್ದರು. ಜಾಥಾ ಪಟ್ಟಣದ ಪ್ರಮುಖ ರಸ್ತೆ ಮೂಲಕ ಹಾಯ್ದು ಕೋಟೆಕಲ್ ಗ್ರಾಮಕ್ಕೆ ತೆರಳಿತು.

ಏಕಲ್ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ಜೋಗೂರು, ಸವಿತಾ ಉಂಕಿ, ಶಶಿಕಲಾ ಭಾವಿ, ಮಹಾದೇವ ಜಗತಾಪ, ಪ್ರಶಾಂತ ಪತ್ತಾರ, ಯೋಗಿಶ ಉಂಕಿ, ಶಂಕ್ರಪ್ಪ ರೂಡಗಿ, ಶಂಕರ ರಾಠೋಡ ಮತ್ತಿತರರು ಇದ್ದರು.