ಜಿಲ್ಲೆ

ಎಂಟು ಸಾವಿರ ಕೋಳಿಗಳು ಸಾವು

ಎಸ್.ಎರ್ರಿಸ್ವಾಮಿ

ಬಳ್ಳಾರಿ : ತಾಲೂಕಿನ ಕಪ್ಪಗಲ್ ಗ್ರಾಮದ ಖಾಸಗಿ ಫಾರಂನಲ್ಲಿ ಕಳೆದ ಮೂರು ದಿನದಲ್ಲಿ ಎಂಟು ಸಾವಿರ ಕೋಳಿಗಳು ಮೃತಪಟ್ಟಿವೆ. ರವಿ ಎಂಬ ಮಾಲೀಕನಿಗೆ ಸೇರಿದ ಕೋಳಿಗಳು ಆಗಿವೆ. ಕಳೆದ ಮೂರು ದಿನದಲ್ಲಿ ಹಂತ ಹಂತವಾಗಿ ಶನಿವಾರಕ್ಕೆ ಎಂಟು ಸಾವಿರ ಕೋಳಿಗಳು ಸತ್ತಿವೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಫಾರಂಗೆ ಭೇಟಿ ನೀಡಿ ಸತ್ತ ಕೋಳಿಗಳ ಮಾದರಿಯನ್ನು ಸಂಗ್ರಹಿಸಿ ಮಧ್ಯಪ್ರದೇಶದ ಭೂಪಾಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು ಮಾ.3 ರಂದು (ಸೋಮವಾರ )ವರದಿ ಬರಲಿದೆ. ಈಗಾಗಲೇ ಫಾರಂ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೋಂಕು ಪೀಡಿತ ಎಂದು ಘೋಷಿಸಲಾಗಿದೆ ಎಂದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಕಾರ್‌ಬಾರಿ ಹೇಳಿದರು.

===