ಬ್ಯಾಡಗಿ: ಈದ್ ಮೀಲಾದ್ ಹಬ್ಬಕ್ಕಾಗಿ ಚೆಂದಾ ಎತ್ತಲು ಬಂದವರಿಗೆ ಬುದ್ಧಿ ಹೇಳಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ಹಲ್ಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು-&ಪ್ರತಿದೂರು ದಾಖಲಾಗಿದೆ.
ಒಂದು ಗುಂಪಿನ ಆರೋಪಿಗಳಾದ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದ ನಿವಾಸಿ ಅಬ್ದುಲ್ ರಫೀಕ್ ಸಾಬ ಮುದಗಲ್ಲ, ಅಗಸರ ರಫೀಕ್ಸಾಬ ಮುದಗಲ್ಲ, ಸದ್ದಾಂ ಕೊರಳಲ್ಲಿ, ಇಯೂಪ್ ಯಾದವಾಡ, ಇಸ್ಮಾಯಿಲ್ ಬಿಜ್ಜೂರ, ಇನಾಯತ್ ಬೆಳ್ಳೂರಿ ಸೇರಿ ಪ್ರಕರಣಕ್ಕೆ ಸಂಬಂಧಿಸಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರ ವಿರುದ್ಧ ಅಜೀಜಸಾಬ ಬಿಜಾಪುರ ಎಂಬುವರು ದೂರು ನೀಡಿದ್ದಾರೆ.
ಮತ್ತೊಂದು ಗುಂಪಿನ ಆರೋಪಿಗಳಾದ ಅಜೀಜ್ ಬೀಜಾಪುರ, ಶೇಬಿನಾಬಾನು ಬಿಜಾಪುರ, ಅಕ್ತರರಜಾ ಬಿಜಾಪುರ, ಮುಕ್ತಿಯಾರ ದೊಡ್ಡಮನಿ, ಸಿಕಂದರ ಮಲೆಬೆನ್ನೂರ, ಮುಸ್ತಫಾ ಬಡಿಗೇರ ಸೇರಿ 9 ಜನರ ವಿರುದ್ಧ ಮಹೆರೂನಬಿ ಎಂಬುವರು ಪ್ರತಿದೂರು ದಾಖಲಿಸಿದ್ದಾರೆ.
ಆರೋಪಿತರು ಈದ್ ಮೀಲಾದ್ ಹಬ್ಬದ ನಿಮಿತ್ತ ಚಂದಾ ಎತ್ತಲು ಬಂದಾಗ ಅಜೀಜಸಾಬ ಇವರಿಗೆ ಬುದ್ಧಿವಾದ ಹೇಳಿದ್ದರು. ಇದೇ ವಿಚಾರಕ್ಕೆ ನಮಗೆ ಬುದ್ಧಿ ಹೇಳುತ್ತೀಯಾ ಎಂದು 10 ಜನ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎದುರಾಳಿಗಳು ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅಬೀಜಸಾಬ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.