ಯಳಂದೂರು : ತಾಲೂಕಿನಾದ್ಯಂತ ಶುಕ್ರವಾರ ಮುಸ್ಲಿಮರ ಪವಿತ್ರ ಹಬ್ಬವಾಗಿರುವ ಈದ್-ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ಇಸ್ಲಾಂದ ಧರ್ಮ ಪ್ರವರ್ತಕರಾದ ಮುಹಮ್ಮದ್ ಪೈಗಂಬರರು ಹುಟ್ಟಿದ ದಿನವನ್ನು ಈದ್ ಮಿಲಾದ್ ಹಬ್ಬವಾಗಿ ಆಚರಿಸುವ ಪರಿಪಾಠವಿದೆ. 1500 ವರ್ಷದ ಈ ಸಂಭ್ರಮವನ್ನು ಪಟ್ಟಣದ ಜಾಮೀಯಾ ಮಸೀದಿ ಸೇರಿದಂತೆ ತಾಲೂಕಿನ ಮಾಂಬಳ್ಳಿ, ಗುಂಬಳ್ಳಿ, ಯರಗಂಬಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಮಸೀದಿಗಳನ್ನು ವಿದ್ಯುತ್ ದೀಪಗಳು ಹಾಗೂ ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಮಾಂಬಳ್ಳಿ ಗ್ರಾಮದಲ್ಲಿ ಮುಸ್ಲಿಮರು ಬೀದಿಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು.
ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮೌಲ್ವಿ ಅಬ್ರಾರ್ ಅಹಮ್ಮದ್ ಅವರು ಫೈಗಂಬರರ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ವಿಶೇಷ ನಾತ್‌ಖಾನಿ (ಧಾರ್ಮಿಕ ಗೀತೆಗಳ ಪಠಣ) ನಮಾಜ್ ಹಾಗೂ ಸಾಮೂಹಿಕ ಪ್ರಾರ್ಥನೆಯ ಕಾರ್ಯಕ್ರಮಗಳು ನಡೆದವು.
ರೋಗಿಗಳಿಗೆ ಹಣ್ಣು ಹಂಪಲು ವಿತರಣೆ: ಪಟ್ಟಣದ ಜಾಮೀಯಾ ಮಸೀದಿಯ ವತಿಯಿಂದ ಈದ್ ಮಿಲಾದ್ ಹಬ್ಬದ ನಿಮಿತ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಪಂ ನಾಮನಿರ್ದೇಶಿತ ಸದಸ್ಯ ಮುನಾವರ್ ಬೇಗ್, ಮುಖಂಡರಾದ ಮುಖಂಡ ನಯಾಜ್ ಖಾನ್, ಇರ್ಫಾನ್, ಜಮೀರ್ ಜಾವೀದ್, ರಿಜ್ವಾನ್, ಇಲಿಯಾಜ್ ಅಹಮ್ಮದ್, ಜಮೀರ್, ಫಯಾಜ್ ಬೇಗ್, ನವಾಬ್ ಬೇಗ್, ಸಲೀಂ, ಆಜಮ್, ತನ್ವೀರ್ ಷರೀಪ್ ಸೇರಿದಂತೆ ಇತರರು ಇದ್ದರು.