ಜಿಲ್ಲೆ

ಹಿರಿಯೂರಿನಲ್ಲಿ ಈದ್ ಮಿಲಾದ್ ಸಂಭ್ರಮ

Davangere - Desk - Mahesh Babu E

ಹಿರಿಯೂರು: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಈದ್ ಮಿಲಾದ್ ಹಬ್ಬವನ್ನು ಗುರುವಾರ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.

ನಗರದ ಇತಿಹಾಸ ಪ್ರಸಿದ್ಧ ನೇಕ್ ಬೇಬಿ ದರ್ಗಾದಿಂದ ಧರ್ಮಗುರುಗಳು, ಸಮಾಜದ ಮುಖಂಡರ ನೇತೃತ್ವದಲ್ಲಿ ಗಾಂಧಿ ವೃತ್ತ, ಮುಖ್ಯ ರಸ್ತೆ ಮಾರ್ಗವಾಗಿ ಜಾಮೀಯ ಮಸೀದಿ ವರೆಗೆ ಮೆರವಣಿಗೆ ನಡೆಯಿತು.

ಮಸೀದಿ, ದರ್ಗಾಗಳನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಸಿರು-ಬಿಳಿ ಬಾವುಟ ಹಿಡಿದಿದ್ದ ನೂರಾರು ಯುವಕರು ಮೆರವಣೆಗೆಯಲ್ಲಿ ಹೆಜ್ಜೆ ಹಾಕಿದರು.

ಧಾರ್ಮಿಕ-ರಾಜಕೀಯ ಪಕ್ಷಗಳ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು.
ಪವಿತ್ರಗ್ರಂಥ ಕುರಾನ್, ಪ್ರವಾದಿ ಮಹಮ್ಮದ್ ಅವರ ಪ್ರವಚನ, ಭಾರತದ ಸಂವಿಧಾನದ ಪೀಠಿಕೆಯನ್ನು ಮುಖಂಡರು ಕೈಯಲ್ಲಿಡಿದು ಪ್ರದರ್ಶಿಸಿದರು.

ಜಾಮೀಯ ಮಸೀದಿ ಧರ್ಮಗುರು ಮುನೀರ್ ಮುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಜಬೀವುಲ್ಲಾ, ಪಿಕಾರ್ಡ್ ಮಾಜಿ ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ, ಜಿ.ದಾದಾಪೀರ್, ಚಮನ್ ಷರೀಫ್, ಅಬ್ದುಲ್ ಅಜೀಜ್, ಅಲ್ಲಿಪೀರ್ ಸಾಬ್, ನೌಷಾದ್, ಅಲ್ತಾಫ್ ಇತರರಿದ್ದರು.