ಜಿಲ್ಲೆ

ನುಸ್‌ರತ್ ಮಿಲಾದುನ್ನಬಿ ಸಂಘ ಕೂಟು ಝಿಯಾರತ್

ಸೌಮ್ಯ ಆರ್

ಬಂಟ್ವಾಳ: ನುಸ್‌ರತ್ ಮಿಲಾದುನ್ನಬಿ ಸಂಘ ಶಾಂತಿಅಂಗಡಿ ಬಿ.ಸಿ.ರೋಡ್ ಆಶ್ರಯದಲ್ಲಿ ಮಿತ್ತಬೈಲು ಜುಮಾ ಮಸೀದಿಯ ವಠಾರದಲ್ಲಿ ಆಚರಣೆ ನಡೆಯಿತು.

ಬೆಳಗ್ಗೆ ಮಿತ್ತಬೈಲು ಮಸೀದಿಯಿಂದ ಮದ್ರಸ ವಿದ್ಯಾರ್ಥಿಗಳಿಂದ ಆರಂಭಗೊಂಡ ರಾೄಲಿ, ಕೈಕಂಬ ಜಂಕ್ಷನ್‌ನಲ್ಲಿ ತಿರುಗಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ಲಿಯಾ ರಸ್ತೆ, ಶಾಂತಿಅಂಗಡಿ ರಸ್ತೆ ಮುಖಾಂತರ ತಲಪಾಡಿಯ ಜಂಕ್ಷನ್‌ನಿಂದ ಮತ್ತೆ ಮಿತ್ತಬೈಲು ಮಸೀದಿಯಲ್ಲಿ ರಾೄಲಿ ಸಮಾಪನಗೊಂಡಿತು. ರಾೄಲಿ ನಂತರ ಕೂಟು ಝಿಯಾರತ್ ನಡೆಯಿತು.

ಮಿತ್ತಬೈಲು ಜುಮಾ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಧ್ವಜಾರೋಹಣಗೈದರು. ಮಿತ್ತಬೈಲು ಜುಮಾ ಮಸೀದಿ ಖತೀಬ ಅಬ್ಬಾಸ್ ಫೈಝಿ, ಫಾರೂಕ್ ಫೈಝಿ, ಕಾರ್ಯದರ್ಶಿ ಅಕ್ಬರ್ ಅಲಿ, ಎನ್‌ಎಂಎಸ್ ಶಾಂತಿಅಂಗಡಿ ಅಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು. ನಂತರ ಮೌಲೂದ್ ಪಾರಾಯಣ, ಅನ್ನದಾನ ಕಾರ್ಯಕ್ರಮ ನಡೆಯಿತು. ಮೆರವಣಿಗೆಯಲ್ಲಿ ಮಿತ್ತಬೈಲ್ ಮಸೀದಿ, ಪರ್ಲಿಯಾ ಮಸೀದಿ, ತಾಳಿಪಡ್ಪು ಮಸೀದಿ, ನಂದರಬೆಟ್ಟು ಮಸೀದಿ, ಕೆಳಗಿನ ಮಿತ್ತಬೈಲ್ ಮದ್ರಸ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.