ಮೂಲ್ಕಿ: ಮೂಲ್ಕಿ ಶಾಫಿ ಜುಮಾ ಮಸೀದಿ ಜಮಾತ್ ವತಿಯಿಂದ 1500ನೇ ಮಿಲಾದುನ್ನಬಿ ದಿನಾಚರಣೆ ಪ್ರಯುಕ್ತ ಕಾರ್ನಾಡ್ ದರ್ಗಾದಿಂದ ಮೂಲ್ಕಿ ಮಸೀದಿವರೆಗೆ ಬೃಹತ್ ಮಿಲಾದ್ ಮೆರವಣಿಗೆ ನಡೆಯಿತು.
ಮೂಲ್ಕಿ ಶಾಫಿ ಜುಮಾ ಮಸೀದಿ ಖತೀಬ ಹಾಜಿ ಉಸ್ಮಾನುಲ್ ಫೈಝಿ ತೊಡಾರು, ಶಾಫಿ ಜುಮಾ ಮಸೀದಿ ಗೌರವಾಧ್ಯಕ್ಷ ಇನಾಯತ್ ಆಲಿ, ಅಧ್ಯಕ್ಷ ಸುಹೈಲ್ ಹೈದರ್ ಎಂ.ಜೆ., ಮೂಲ್ಕಿ ನಪಂ ಸದಸ್ಯ ಪುತ್ತು ಬಾವ, ಮಸೀದಿ ಕೋಶಾಧಿಕಾರಿ ಇಕ್ಬಾಲ್ ಅಹಮದ್, ಕಾರ್ನಾಡ್ ಮಸೀದಿ ಖತೀಬರಾದ ರಿಯಾಝ್ ಫೈಝಿ, ಜಿಲ್ಲಾ ವಕ್ಫ್ ಅಧಿಕಾರಿ ಎಂ.ಅಬೂಬಕ್ಕರ್, ಮಸೀದಿ ಪ್ರಧಾನ ಕಾರ್ಯದರ್ಶಿ ಮೊಹಮದ್ ಫಾರೂಕ್, ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ರಿಯಾಝ್, ನುಸ್ರುತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ, ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ಪಾಝ್, ಮಸೀದಿ ಜತೆ ಕಾರ್ಯದರ್ಶಿ ಕೆ.ಎ.ಇಬ್ರಾಹಿಂ ಉಪಸ್ಥಿತರಿದ್ದರು.