ಮಂಜೇಶ್ವರ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಉದ್ಯಾವರ ಸಾವಿರ ಜಮಾಅತ್ ವತಿಯಿಂದ ನಡೆದ ಮೆರವಣಿಗೆಯಲ್ಲಿ ಸೌಹಾರ್ದ ಮತ್ತೊಮ್ಮೆ ಕಂಗೊಳಿಸಿತು. ಮೆರವಣಿಗೆಯಲ್ಲಿ ಹಿಂದುಗಳು ಮುಸ್ಲಿಂಮರನ್ನು ಆತ್ಮೀಯವಾಗಿ ಸ್ವಾಗತಿಸಿ, ಸಿಹಿತಿಂಡಿ ವಿತರಣೆ ಮೂಲಕ ಬಾಂಧವ್ಯ ಮತ್ತಷ್ಟು ಬಲಪಡಿಸುವ ದೃಶ್ಯ ಕಂಡು ಬಂತು.
ಉದ್ಯಾವರದ ಸಾವಿರ ಜಮಾಅತ್ ವತಿಯಿಂದ ಆಯೋಜಿಸಿದ್ದ ಬೃಹತ್ ಮೆರವಣಿಗೆಯಲ್ಲಿ 13 ಮೊಹಲ್ಲಾಗಳ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆ ಕರೋಡ ಭಾಗದಲ್ಲಿ ತಲುಪುತ್ತಿದ್ದಂತೆ ಉದ್ಯಾವರ ಶ್ರೀ ಅರಸು ಮಂಜಿಷ್ಣಾರು ಕ್ಷೇತ್ರದ ದೈವಪಾತ್ರಿ ರಾಜ ಬೆಳ್ಚಡ ನೇತೃತ್ವದಲ್ಲಿ ಹಿಂದುಗಳು ಸಿಹಿತಿಂಡಿ ವಿತರಿಸಿದರು.