ಕೆ.ಎಂ.ದೊಡ್ಡಿ: ಇಲ್ಲಿನ ಭಾರತಿ ಪ್ರೌಢಶಾಲೆಯಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಷನ್ ಸಹಕಾರದೊಂದಿಗೆ ವಾರದ 6 ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಗುರುವಾರ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ದೃಷ್ಟಿಯಿಂದ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತದೆ. ಮಕ್ಕಳ ಬೆಳವಣಿಗೆಗೆ ಪ್ರತಿದಿನ ಇಂತಿಷ್ಟು ಪೋಷಕಾಂಶ ಬೇಕು ಎಂದರು.
ಬಿ.ಇ.ಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಕರ್ನಾಟಕ ಸರ್ಕಾರ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಷನ್ 6 ದಿನ ಮೊಟ್ಟೆ ನೀಡುವ ಉದ್ದೇಶವೇನೆಂದರೆ ಎಲ್ಲ ಮಕ್ಕಳು ಅಪೌಷ್ಟಿಕತೆಯಿಂದ ಹೊರಬೇಕೆಂದು ತಿಳಿಸಿದರು.
ಮುಖ್ಯ ಶಿಕ್ಷಕ ಪಿ.ರಾಜೇಂದ್ರ ರಾಜೇಅರಸ್, ಶಿಕ್ಷಕರಾದ ಪಿ. ಜಗದೀಶ್, ಬಸವರಾಜು, ಕೆ.ಜಿ.ನಾಗರಾಜು, ನಂದಿನಿ, ಶಿವಮಣಿ, ಸ್ವಾಮಿ, ಶಿಲ್ಪಾ ಮತ್ತಿತರರು ಹಾಜರಿದ್ದರು.