ಜಿಲ್ಲೆ

ಮೂಲ ಸೌಕರ್ಯ ಒದಗಿಸಲು ಪ್ರಯತ್ನ

ಸೋಮಲಿಂಗ ತಳವಾರ

ರಾಯಬಾಗ: ಮತೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪಿಎಂಶ್ರೀ ಯೋಜನೆಯಡಿ ಮಂಜೂರಾದ 6 ಲ ರೂ. ಅನುದಾನದಲ್ಲಿ ಕೆಇಬಿ ಕಾಲನಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿ ರಿಪೇರಿ ಕಾಮಗಾರಿ ಹಾಗೂ ಕೇಂದ್ರ ಶಾಲೆಯ ಆವರಣದಲ್ಲಿರುವ ಕನ್ನಡ ಪ್ರಾಥಮಿಕ ಶಾಲೆ ಮತ್ತು ಉರ್ದು ಶಾಲೆಗಳಿಗೆ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 10 ಲ ರೂ. ಅನುದಾನದಲ್ಲಿ ಹೈಟೆಕ್​ ಶೌಚಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಣ ನೀಡುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ ಎಂದರು.

ಬಿಆರ್​ಸಿ ಬಸವರಾಜ ಕಾಂಬಳೆ, ಜಿ.ಪಂ ಎಇಇ ವಿ.ಆರ್​.ಭಜಂತ್ರಿ, ಎಇ ಎಸ್​.ಎಸ್​.ಹೊಸಮನಿ, ಸದಾಶಿವ ೂರ್ಪಡೆ, ಮಹೇಶ ಕರಮಡಿ, ದತ್ತಾ ಜಾಧವ, ಸುರೇಶ ಮಾಳಿ, ಸದಾನಂದ ಹಳಿಂಗಳಿ, ರವಿ ತರಾಳ, ಗೋಪಾಲ ಕೋಚರೆ, ಜಿಯಾವುಲ್ಲ ಮುಲ್ಲಾ, ಮಹೇಶ ಕುಲಗುಡೆ, ಭಾರತಿ ಲೋಹಾರ, ಸುಭಾಸ ಕಾಂಬಳೆ, ರಿತೇಶ ಅವಳೆ, ರಾಜು ಕುರಾಡೆ, ಎ.ಎಸ್​.ಕೊರಬು, ಎನ್​.ವಿ.ಮಠದಕರ ಇತರರಿದ್ದರು.