ಬೆಳಗುಂದಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಕೃಷ್ಣ ಬೆಳಗಾಂವ್ಕರ್, ಶಿವಾಜಿ ಬೋಕಡೆ, ಸೋಮಣ್ಣ ಗಾವಡಾ, ದಯಾನಂದ ಗಾವಡಾ ಇತರರಿದ್ದರು. 
ಜಿಲ್ಲೆ

ಶಾಲಾ-ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸಲು ಶ್ರಮ

ಬೆಳಗಾವಿ: ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವರಾದ ನಂತರ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ವಿಶೇಷವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ತಾಲೂಕಿನ ಬೆಳಗುಂದಿ ಗ್ರಾಮದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಪ್ರೊಪ್ಲೆಕ್ಸ್ ಸೀಟ್ ಸಭಾ ಮಂಟಪವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳು ಸಹ ದೊಡ್ಡ ಹುದ್ದೆಗೇರಬೇಕೆನ್ನುವುದೇ ನಮ್ಮ ಅಪೇಕ್ಷೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಬೆಳಗಾಂವ್ಕರ್, ಶಿವಾಜಿ ಬೋಕಡೆ, ಸೋಮಣ್ಣ ಗಾವಡಾ, ದಯಾನಂದ ಗಾವಡಾ, ಮನೋಹರ ಬೆಳಗಾಂವ್ಕರ್, ರಹಿಮಾನ್ ತಹಶೀಲ್ದಾರ್, ಶಿವಾಜಿ ಬೆಟಗೇರಿಕರ, ಸುರೇಶ ಕಿಣೇಕರ, ಕಿರಣ ಮೋಟನಕರ, ಮುಕುಂದ ಹಿಂಡಾಲ್ಗೆಕರ, ಮಹಾದೇವ ಪಾಟೀಲ ಇತರರಿದ್ದರು.