ವಿಜಯಪುರದ ವೇದ ಅಕಾಡೆಮಿಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಅಕಾಡೆಮಿ ಉಪಾಧ್ಯಕ್ಷ ದಯಾನಂದ ಕೆಲೂರ, ಎನ್​.ಜಿ. ಯರನಾಳ, ರಶ್ಮಿ ಕವಟಗಿಮಠ ಮತ್ತಿತರರಿದ್ದಾರೆ. 
ಜಿಲ್ಲೆ

ತಾರತಮ್ಯ ನಿವಾರಿಸಲು ಶ್ರಮ

ಗಿರೀಶ ಸಗರ

ವಿಜಯಪುರ: ಹರಿಭಕ್ತ ಕನಕದಾಸರ ಗುರು ಭಕ್ತಿ, ಶ್ರದ್ಧೆ, ಸಮಾಜ ತಿದ್ದಲು ಬಳಸಿದ ನೀತಿಯನ್ನು ಮಕ್ಕಳು ಅರಿತುಕೊಂಡು ಉತ್ತಮ ಸಮಾಜ ನಿರ್ಮಿಸಲು ಪಣತೊಡಬೇಕು ಎಂದು ವೇದ ಅಕಾಡೆಮಿ ಉಪಾಧ್ಯಕ್ಷ ದಯಾನಂದ ಕೆಲೂರ ಹೇಳಿದರು.

ನಗರದ ಹೊರ ವಲಯದ ವೇದ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿಯಲ್ಲಿ ಮಾತನಾಡಿದರು.

ಮುಖ್ಯ ಅತಿಥಿ ಸಂಸ್ಥೆ ಕಾರ್ಯದರ್ಶಿ ಎನ್​.ಜಿ. ಯರನಾಳ ಮಾತನಾಡಿ, ಕನಕದಾಸರು ಸಮಾಜದಲ್ಲಿನ ತಾರತಮ್ಯ ನಿವಾರಿಸಲು ಅತ್ಯಂತ ನಯವಾಗಿ ತಮ್ಮ ಕೀರ್ತನೆಗಳಲ್ಲಿ, ಕೃತಿಗಳಲ್ಲಿ ತಿಳಿಸಿದ್ದು, ಶಿಕರು ಅವುಗಳನ್ನು ಅರಿತುಕೊಂಡು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.

ದೈಹಿಕ ಶಿಕ ಎಸ್​.ಎಂ. ಪಾಟೀಲ ಮಾತನಾಡಿದರು. ಪ್ರಾಚಾರ್ಯ ಸುನೀಲ ಬಿ.ಎಂ., ಮುಖ್ಯ ಗುರುಮಾತೆ ರಶ್ಮಿ ಕವಟಗಿಮಠ, ಕಲ್ಯಾಣಿ ಕಾಳೆ, ಶೀಬಾ ಮನಿಯಾರ ಮತ್ತಿತರರಿದ್ದಾರೆ.