ಜಿಲ್ಲೆ

ಹಾಲು ಒಕ್ಕೂಟದ ಅಭಿವೃದ್ಧಿಗೆ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಾಲು ಉತ್ಪಾದಕರ, ಗ್ರಾಹಕರ ಹಾಗೂ ನೌಕರರ ಹಿತಾಸಕ್ತಿ ಕಾಪಾಡುವ ಮೂಲಕ ಒಕ್ಕೂಟವನ್ನು ಲಾಭದತ್ತ ಒಯ್ಯಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.
ನಗರದ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ರೋಟರಿ ಕ್ಲಬ್​ ಧಾರವಾಡ ಸೆಂಟ್ರಲ್​ ಮತ್ತು ರೋಟರಿ ಕ್ಲಬ್​ ಧಾರವಾಡ ಪ್ರೈಮ್ ವತಿಯಿಂದ ಇಲ್ಲಿನ ತೇಜ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹೈನುಗಾರಿಕೆ ನಡೆಸುವವರಿಗೆ ಸಹಾಯ ಸಹಕಾರ ನೀಡುತ್ತಾ ಅವರ ಏಳಿಗೆಗೆ ಯೋಜನೆ ರೂಪಿಸಿ ಕಾರ್ಯ ಮಾಡುವೆ ಎಂದರು.
ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, 30 ವರ್ಷಗಳ ಕಾಲ ಒಕ್ಕೂಟದೊಂದಿಗೆ ಒಡನಾಟ ಹೊಂದಿದ ಮುಗದ ಸಂಸ್ಥೆಯನ್ನು ಲಾಭದತ್ತ ಒಯ್ಯುತ್ತಾರೆ ಎಂಬ ನಂಬಿಕೆ ಇದೆ ಎಂದರು.
ವಕೀಲ ಅರುಣ ಜೋಶಿ, ರೋಟರಿ ಕ್ಲಬ್​ ಅಸಿಸ್ಟೆಂಟ್​ ಗವರ್ನರ್​ ಡಾ. ಪಲ್ಲವಿ ದೇಶಪಾಂಡೆ, ಡಾ. ಶಿಲ್ಪಾ ಆಡೂರ, ಧಾರವಾಡ ಸೆಂಟ್ರಲ್​ ಅಧ್ಯಕ್ಷ ಕರಣ ದೊಡವಾಡ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್​. ಫರಾಸ್​, ಇಂಜಿನಿಯರ್​ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿದರು. ಡಾ. ರಾಜನ್​ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.
ಕೆ.ಎಚ್​ ನಾಯಕ, ಡಾ. ಕವನ ದೇಶಪಾಂಡೆ, ಎಸ್​.ಎಂ. ದಾನಪ್ಪಗೌಡರ, ಪ್ರಮೀಳಾ ಜಕ್ಕಣ್ಣವರ, ಪ್ರಕಾಶ ಬಾಳಿಕಾಯಿ, ಅರುಣ ಶೀಲವಂತ, ಪ್ರವಿಣ ಜೈನ್​, ಮೋತಿಲಾಲ್​ ಜೈನ್​, ವಿರೇಶ ಕೆಲಗೇರಿ, ಅರವಿಂದ ಕುಲಕರ್ಣಿ, ರಮೇಶ ಬಣಕಾರ, ರೋಟರಿ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು, ಇತರರು ಇದ್ದರು.
ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ವಾಮನ ಮಂತ್ರಿ ವಂದಿಸಿದರು. ನಂತರ ಗಾಯಕರಾದ ಪ್ರೇಮಾನಂದ ಶಿಂಧೆ ಮತ್ತು ಶಿವಾನಂದ ಹೂಗಾರ ಸಂಗೀತ ಪ್ರಸ್ತುತಪಡಿಸಿದರು.