ಕಟಕೋಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದಲ್ಲಿ ಯೋಜನಾಧಿಕಾರಿ ಭಾಸ್ಕರ ಮಾತನಾಡಿದರು. ಸಚ್ಚಿದಾನಂದ ಸ್ವಾಮೀಜಿ, ಎಚ್.ಆರ್.ಲವಕುಮಾರ, ಟಿ.ಪಿ.ಮನ್ನೋಳಿ, ಪಾರ್ವತಿ ಪಾಟೋಳಿ ಇತರರು ಇದ್ದರು. 
ಜಿಲ್ಲೆ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಯತ್ನ

ಕಟಕೋಳ: ಕರ್ನಾಟಕದಾದ್ಯಂತ ಮದ್ಯವ್ಯಸನಿಗಳಿಗೆ 1,842 ಶಿಬಿರ ನಡೆಸಿ ಸುಮಾರು 1.85 ಲಕ್ಷ ಕುಟುಂಬಗಳ ಸ್ಥಿತಿಗತಿ ಸುಧಾರಿಸಲಾಗಿದೆ ಎಂದು ಯೋಜನಾಧಿಕಾರಿ ಭಾಸ್ಕರ ಹೇಳಿದರು.

ಸ್ಥಳೀಯ ಬಿ.ಎನ್.ಅಡ್ಡಣಗಿ ಸಭಾಭವನದಲ್ಲಿ ಶುಕ್ರವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ 1,843ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು, ಮದ್ಯಪಾನ ಮಾಡಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಸದಾಕಾಲ ಶ್ರಮಿಸುತ್ತಿದೆ ಎಂದರು. ಕಟಕೋಳ ಮುದಕವಿ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಿರ್ದೇಶಕ ಎಚ್.ಆರ್.ಲವಕುಮಾರ ಮಾತನಾಡಿದರು. ಟಿ.ಪಿ.ಮನ್ನೋಳಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಪಾರ್ವತಿ ಪಾಟೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಷ ಹನಸಿ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಬಂಡ್ರೊಳ್ಳಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಎ.ದೇಸಾಯಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಂ.ಎಂ.ಆತಾರ, ಬಿಡಿಸಿಸಿ ನಿರ್ದೇಶಕ ಎಸ್.ಎಸ್.ಢವಣ, ಪಿಕೆಪಿಎಸ್ ನಿರ್ದೇಶಕ ಬಿ.ಜಿ.ಹೊಸಮನಿ ಪ್ರಗತಿಪರ ರೈತ ಐ ಬಿ.ಪಾಟೀಲ, ಎಸ್.ಬಿ.ಅಡ್ಡಣಗಿ, ಗ್ರಾಪಂ ಸದಸ್ಯ ರಮೇಶ ಕಾಡೇಶನವರ ಇತರರು ಇದ್ದರು. ಯೋಜನಾಧಿಕಾರಿ ಸತೀಶ ಡಿ. ಸ್ವಾಗತಿಸಿದರು, ಮೇಲ್ವಿಚಾರಕ ನಾಗೇಂದ್ರ ನಿರೂಪಿಸಿದರು.